ಆಫ್ರಿಕನ್ ಬಸವನ ಹುಳ ಬಾಧಿತ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳ ಭೇಟಿ
ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲದ ಆಫ್ರಿಕನ್ ಬಸವನ ಹುಳು ಬಾಧಿತ ತೋಟಗಳಿಗೆ ಇಂದು ತೋಟಗಾರಿಕಾ ಅಧಿಕಾರಿಗಳು ಭೇಟಿ ನೀಡಿದ್ದಾರೆ.















ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಪ್ರದೇಶದ ಹಲವು ಕೃಷಿಕರ ಅಡಿಕೆ ತೋಟಗಳಲ್ಲಿ ಕಳೆದ ಕೆಲವು ಸಮಯದಿಂದ ದೈತ್ಯ ಆಫ್ರಿಕನ್ ಬಸವನ ಹುಳು ಕಂಡು ಬಂದಿದ್ದು, ಕೃಷಿಕರು ತೊಂದರೆಗೊಳಗಾಗಿದ್ದರು.

ಜು. 16 ರಂದು ಸುದ್ದಿ ಚಾನೆಲ್‌ನಲ್ಲಿ ಈ ಕುರಿತ ವಿಶೇಷ ವರದಿ ಪ್ರಸಾರವಾಗಿತ್ತು. ನಿನ್ನೆ ನಡೆದ ಸುದ್ದಿಯ ಸುತ್ತ ಕಾರ್ಯಕ್ರಮದಲ್ಲೂ ಈ ಕುರಿತು ಚರ್ಚೆ ಆಗಿತ್ತು.
ಇಂದು ಸುಳ್ಯದ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಮೋದ್, ತೋಟಗಾರಿಕಾ ಅಧಿಕಾರಿಗಳಾದ ಶ್ರೀಮತಿ ಸುಹಾನ, ಅರಬಣ್ಣ ಪೂಜೇರಿ ಮೊದಲಾದವರು ಈ ಕೃಷಿಕರ ತೋಟಗಳಿಗೆ ಭೇಟಿ ನೀಡಿದ್ದು, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.











