ಎಣ್ಮೂರು : ಸ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ದ್ವಿಭಾಷಾ ತರಗತಿ ಪ್ರಾರಂಭೋತ್ಸವ ಮತ್ತು ಉದ್ಘಾಟನೆ

0


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ ಸರಕಾರದ ಆದೇಶದಂತೆ ಆಂಗ್ಲ ಮಾಧ್ಯಮ ದ್ವಿಭಾಷಾ ತರಗತಿ ಪ್ರಾರಂಭೋತ್ಸವ ಮತ್ತು ಉದ್ಘಾಟನೆ ಜು. ೧೮ರಂದು ನಡೆಯಿತು.


ಶಾಸಕಿ ಕು.ಭಾಗೀರಥಿ ಕಾರ್ಯಕ್ರಮದ ಉದ್ಘಾಟನೆ ಮಾಡಿ, ಆಂಗ್ಲ ಮಾಧ್ಯಮ ಶಿಕ್ಷಣ ದ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಅವರು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಎಡಮಂಗಲ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು , ಎಣ್ಮೂರು ಗರಡಿ ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ಷರೀಫ್, ಎಣ್ಮೂರು ಹೈಸ್ಕೂಲ್ ಮುಖ್ಯಶಿಕ್ಷಕ ಟೈಟಸ್ ವರ್ಗೀಸ್, ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಗೌಡ ಪಟ್ಟೆ, ಎಣ್ಮೂರು ಮತ್ತು ಪಂಜ ಸಿಆರ್‌ಪಿಗಳಾದ ಜಯಂತ್ . ಕೆ.,
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಲೋಕನಾಥ ರೈ ಪಟ್ಟೆ, ಶಾಲೆಯ ಮಹಾ ದಾನಿಗಳಾದ ಶ್ರೀಮತಿ ಮಂಜುಳಾ ಚಿಕ್ಕರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.


ಗೌರವ ಶಿಕ್ಷಕ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ಭುವನೇಶ್ವರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಶ್ರೀಮತಿ ಸುರೇಖಾ ವಂದಿಸಿದರು. ಸಹ ಶಿಕ್ಷಕಿರಾದಂತಹ ಶ್ರೀಮತಿ ಶಾಂತಮ್ಮ ಹಾಗೂ ಶ್ರೀಮತಿ ರೇಷ್ಮಾ ಕಾರ್ಯಕ್ರಮಕ್ಕೆ ಸಹಕರಿಸಿದರು.