ಪೆರಾಜೆ ಗ್ರಾಮದ ಪೀಚೆಮನೆ ಪುರುಷೋತ್ತಮ್‌ರವರ ಪುತ್ರ ದೀಕ್ಷಿತ್‌ರವರು ಅಸೌಖ್ಯದಿಂದ ನಿಧನರಾದರು.















ಅವರಿಗೆ ೨೯ ವರ್ಷ ವಯಸ್ಸಾಗಿತ್ತು. ದೀಕ್ಷಿತ್‌ರಿಗೆ ಕರುಳಿಗೆ ಸಂಬಂಧಿಸಿ ಹೊಟ್ಟೆನೋವು ಶುರುವಾದ ಕಾರಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ತಿಳಿಸಿದ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಕರೆದೊಯ್ಯುವಾಗಲೇ ದಾರಿಮಧ್ಯೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ತಾಯಿ ರಾಧಮ್ಮ, ಸಹೋದರ ಕಿಶೋರ್, ಸಹೋದರಿ ಶೃತಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.










