ಸುಳ್ಯದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ

0

ಎಡಮಂಗಲ ಹಾಲು ಉತ್ಪಾದಕರ ಸ.ಸಂಘಕ್ಕೆ ಸತತ 4ನೇ ಬಾರಿಗೆ ತಾಲೂಕಿನ ಉತ್ತಮ ಪ್ರಥಮ ಸಂಘ ಪ್ರಶಸ್ತಿ

ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನ ಸಭೆಯು ಜು. 18 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು,ಹಾಗೂ ಅಧಿಕಾರಿ ವರ್ಗದವರು ಭಾಗವಹಿಸಿದ್ದರು. ಸಭೆಯಲ್ಲಿ ತಾಲೂಕಿನ ಉತ್ತಮ ಪ್ರಥಮ ಸಂಘವೆಂದು ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘವು ಆಯ್ಕೆ ಆಗಿದ್ದು,ಸಂಘವು ಸತತ ನಾಲ್ಕನೇ ಬಾರಿಗೆ ಉತ್ತಮ ಸಂಘವೆಂದು ಕೀರ್ತಿಗೆ ಪಾತ್ರವಾಗಿದೆ.


ಹಾಗೂ ಮಧ್ಯಮ ವರ್ಗದ ಹೈನುಗಾರರಾಗಿ ಶ್ರೀಮತಿ ಪುಷ್ಪಾವತಿ ವಸಂತ ಅಳಕ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.


ತಾಲೂಕಿನ ಉತ್ತಮ ಕೃತಕ ಗರ್ಭಧಾರಣಾ ಸಿಬ್ಬಂದಿಯಾಗಿ ಇದೇ ಸಂಘದ ಹರಿಯಪ್ಪ ಪುಳಿಕುಕ್ಕು ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು ಹಾಗೂ ಸಂಘದ ಸದಸ್ಯರ ಮಕ್ಕಳಾದ ಕುಮಾರಿ ಚರಿಷ್ಮಾ ಇವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಹಾಗೂ ಕುಮಾರಿ ಪ್ರಜ್ಞಾ ಇವರು ಎಸ್ ಎಸ್ ಎಲ್ ಸಿ ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.