ಅಂತರರಾಷ್ಟ್ರೀಯ ರೋಟರಿ ಕ್ಲಬ್ಬಿನ ಸ್ಥಾಪಕ ಪೌಲ್ ಹ್ಯಾರಿಸ್ ಅವರ ನೆನಪಲ್ಲಿ ಕೊಡ ಮಾಡುವ ರೋಟರಿಯ ಅತ್ಯುನ್ನತ ಪದವಿ ಪಿ ಎಚ್ ಎಫ್ ಅನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ಹಾಗೂ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಅವರಿಗೆ ರೋಟರಿ ಸಂಸ್ಥೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.















ವಿಶ್ವನಾಥ ನಡುತೋಟ ಅವರು ಜೆಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀಯ ಸ್ಥಾಪಕ ಅಧ್ಯಕ್ಷರಾಗಿ,ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷರಾಗಿ ಹೀಗೆ ಹಲವು ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.










