














ಕಲ್ಲುಗುಂಡಿಯ ಸುಳ್ಯಕೋಡಿ ಸಮೀಪದ ವೆಲ್ಡಿಂಗ್ ಶಾಪ್ ನ ಹೊರಗೆ ಇರಿಸಿದ ಜನ ರೇಟರನ್ನು ಕಳ್ಳರ ತಂಡವೊಂದು ಹೊತ್ತೊಯ್ದ ಘಟನೆ ಜುಲೈ 19 ರಂದು ಬೆಳಕಿಗೆ ಬಂದಿದೆ.
ಕಲ್ಲುಗುಂಡಿಯ ಸುಳ್ಯಕೋಡಿ ಸಮೀಪದ ರಮೇಶ್ ಹುಲ್ಲು ಬೆಂಕಿ ಮಾಲಿಕತ್ವದ ಶ್ರೀ ವಿಷ್ಣು ಇಂಡಸ್ಟ್ರೀಯಲ್ಲಿರಿಸಿದ್ದ ಸುಮಾರು 60,000 ರದ ಬೆಲೆಯ ಜನರೇಟರ್ ಕಳವಾಗಿದೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಇಂದು ಬೆಳಿಗ್ಗೆ ಶಾಪ್ ಓಪನ್ ಮಾಡಿ ಜನರೇಟರ್ ಸ್ಟಾರ್ಟ್ ಮಾಡಲು ಶೆಡ್ ಗೆ
ಹೋದಾಗ ಜನರೇಟರ್ ಹಾಗೂ ಅದರ ಪಾರ್ಟ್ಸ್ ಇರಲಿಲ್ಲ. ಕೂಡಲೇ ಕಲ್ಲುಗುಂಡಿ ಹೊರ ಠಾಣಾ ಪೊಲೀಸ್ ರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ .



