














ಕೆಲ ದಿನಗಳ ಹಿಂದೆ ಸುರಿದ ಗಾಳಿಮಳೆಗೆ ಬಳ್ಪ ಗ್ರಾಮದ ಸಂಪ್ಯಾಡಿ ಬೊಮ್ಮಣ್ಣ ಮಡಿವಾಳ ಎಂಬವರ ಮಗ ಸುಂದರ ಮಡಿವಾಳರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾಗಿದ್ದು, ವಾಸ ಮಾಡಲು ಸಾಧ್ಯವಿಲ್ಲದ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಬಳ್ಪ ಗ್ರಾ.ಪಂ. ಸದಸ್ಯರು, ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಯವರು ಭೇಟಿ ನೀಡಿರುವುದಾಗಿ ತಿಳಿದು ಬಂದಿದ್ದು, ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.










