ರೋಟರಿ ಜಿಲ್ಲೆ 3181ರ ವಲಯ 5ರ ಝೋನಲ್ ಲೆಫ್ಟಿನೆಂಟ್ ಆಗಿ ಡಾ. ಪುರುಷೋತ್ತಮ ಕಟ್ಟೆಮನೆ

0


ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181ರ ವಲಯ 5ರ ಝೋನಲ್ ಲೆಫ್ಟಿನೆಂಟ್ ಆಗಿ ಡಾ.ಪುರುಷೋತ್ತಮ ಕೂಜುಗೋಡು ಕಟ್ಟೆಮನೆ ಇವರನ್ನು 2025-26ನೇ ಸಾಲಿಗೆ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಕಣ್ಣನ್ ರವರು ಆಯ್ಕೆ ಮಾಡಿರುತ್ತಾರೆ.

ಇವರು 2011ರಲ್ಲಿ ಪ್ರತಿಷ್ಠಿತ ರೋಟರಿ ಕ್ಲಬ್ ಸುಳ್ಯದ ಸದಸ್ಯರಾಗಿ ಸೇರ್ಪಡೆಗೊಂಡು ಕ್ಲಬ್ ನ ಕೋಶಾಧಿಕಾರಿ, ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, 2019-20 ನೇ ಸಾಲಿನಲ್ಲಿ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾಗಿ, ರೋಟರಿ ಜಿಲ್ಲೆ 3181ರ 2ನೇ ಅತ್ಯುತ್ತಮ ಕ್ಲಬ್ ಎಂದು ಪ್ರಶಸ್ತಿ ಪಡೆಯುವುದರೊಂದಿಗೆ, 2019-20ನೇ ಸಾಲಿನಲ್ಲಿ ಸಲ್ಲಿಸಿದ ಅತ್ಯುತ್ತಮ ಸಮಾಜ ಸೇವೆಗಾಗಿ ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷರಿಂದ “ಪ್ರೆಸಿಡೆನ್ಸಿಯಲ್ ಸೈಟೇಶನ್ ಪ್ರಶಸ್ತಿ” ಯನ್ನು ಪಡೆದುಕೊಂಡಿರುತ್ತಾರೆ.

ಪ್ರಸ್ತುತ ಇವರು ರೋಟರಿ ವಿದ್ಯಾಸಂಸ್ಥೆಗಳನ್ನು ಮುನ್ನಡೆಸುವ ರೋಟರಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯಾಗಿ ಎರಡನೇ ಅವಧಿಗೆ ತಮ್ಮ ಸೇವೆ ಸಲ್ಲಿಸುತ್ತಾ ಇದ್ದಾರೆ.