














ಪೆರುವಾಜೆ ಗ್ರಾಮದ ಮುಕ್ಕೂರಿನ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.
20 ರಂದು ನಡೆದಿದೆ.
ಕಾನಾವು ಪುಳಿತ್ತಡಿ ನಿವಾಸಿ ಬೆಳಿಯಪ್ಪ ಗೌಡ ಎಂಬವರು ಕುದ್ಮಾರು ಗ್ರಾಮದ ಚಾಪಳ್ಳ ಎಂಬಲ್ಲಿ ಬಸ್ಟೆಂಡ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಇವರಿಗೆ 70 ವರ್ಷ ಪ್ರಾಯವಾಗಿದ್ದು ಮೃತರು ಪತ್ನಿ ಶ್ರೀಮತಿ ವಿಜಯ,ಪುತ್ರರಾದ ನಿತ್ಯಪ್ರಸಾದ್, ಪ್ರಶಾಂತ್,ತಾರಾನಾಥ ಹಾಗೂ ಪುತ್ರಿ ಪ್ರಮೀಳಾರವರನ್ನು ಅಗಲಿದ್ದಾರೆ.










