














ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಸಮಿತಿ ಕೊಡಿಯಾಲಬೈಲು ಇದರ ೨ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಸುವ ಕುರಿತು ಜು.೦೩ ರಂದು ಎಂ.ಜಿ.ಎಂ. ಶಾಲೆಯಲ್ಲಿ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಆಗಸ್ಟ್ ೦೮, ೨೦೨೫ ಶುಕ್ರವಾರದಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ೨ನೇ ವರ್ಷದ ಪೂಜೆಯನ್ನು ಗೌಡ ಸಮುದಾಯ ಭವನ ಕೊಡಿಯಾಲಬೈಲುವಿನಲ್ಲಿ ಸಂಜೆಯಿಂದ ಪ್ರಾರಂಭಿಸುವುದೆಂದು ತೀರ್ಮಾನಿಸಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು, ಕಾರ್ಯದರ್ಶಿ ಶ್ರೀಮತಿ
ಜಯಮಾಲ ಕುದ್ಪಾಜೆ, ಕೋಶಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಕೊಡಿಯಾಲಬೈಲು ಹಾಗೂ ಸಂಯೋಜಕರಾಗಿ ಲತಾಪ್ರಸಾದ್ ಕುದ್ಪಾಜೆ ಮತ್ತು ಉಪಾಧ್ಯಕ್ಷರಾಗಿ ಶಾರದಾ ಎನ್ ರಾವ್, ಜತೆ ಕಾರ್ಯದರ್ಶಿ ಚಿತ್ರಲೇಖ ಮಡಪ್ಪಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ನಮೃತ ನಟರಾಜ್ ಶರ್ಮ ಮತ್ತು ಪದ್ಮಾವತಿ ಕೊಡಿಯಾಲಬೈಲು ಹಾಗೂ ಸದಸ್ಯರುಗಳನ್ನಾಗಿ ಮಮತ ಕುದ್ಪಾಜೆ, ಕವಿತ ಪಾನತ್ತಿಲ, ನಳಿನಾಕ್ಷಿ ಸೀತಾನಂದ, ಶ್ವೇತ ಕೆ.ಎಸ್, ಭಾಗ್ಯಶ್ರೀ, ನಳಿನಿ ಕೆ.ಎಸ್, ಲತಾ ಚಂದ್ರಹಾಸ್, ಅನಿತಾ ರಾಧಾಕೃಷ್ಣ, ವಿದ್ಯಾಶ್ರೀ ಕೆ, ಜಯಶೀಲ ಪಾನತ್ತಿಲ, ಅರ್ಚನ ಮಧುಕಿರಣ, ಸೌಮ್ಯ ವಿನೋದ್, ಪ್ರೇಮ ವಿನಯಚಂದ್ರ, ಸುಶೀಲ ಚಂದ್ರಶೇಖರ, ಯಶೋಧ ಬಿ.ಸಿ, ಗೀತಾ ಸುರೇಶ್ ಕೊಡಿಯಾಲಬೈಲು ಆಯ್ಕೆ ಮಾಡಲಾಯಿತು. ಈ ಪೂಜೆಯನ್ನು ಸಾರ್ವಜನಿಕ ಪೂಜಾ ಸಮಿತಿ, ಸುಳ್ಯ ನಗರ ಗೌಡ ಮಹಿಳಾ ಘಟಕ, ಶ್ರೀ ವರಲಕ್ಷ್ಮೀ ಯುವತಿ ಮಂಡಲ ಕೊಡಿಯಾಲಬೈಲು ಹಾಗೂ ಎಂ.ಜಿ.ಎಂ ಶಾಲಾ ಪೋಷP ರ ಸಮಿತಿ ಮತ್ತು ಶ್ರೀ ಮಹಮ್ಮಾಯಿ ಸೇವಾ ಮಿತಿ ಕೊಡಿಯಾಲಬೈಲು ಇವರ ಜಂಟಿ ನೇತ್ರತ್ವದಲ್ಲಿ ನಡೆಯಲಿದೆ.










