ಏನೆಕಲ್ಲು: ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ ಅಡ್ಪಂಗಾಯ ಅವರಿಗೆ ಬೀಳ್ಕೊಡುಗೆ

0

ಏನೆಕಲ್ಲು ಅಂಗನವಾಡಿ ಕೆಂದ್ರದ ಕಾರ್ಯಕರ್ತೆ ಇತ್ತೀಚೆಗೆ ನಿವೃತ್ತಿ ಹೊಂದಿದ ಶ್ರೀಮತಿ ಜಯಲಕ್ಷ್ಮಿ ಅಡ್ಪಂಗಾಯ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜು.18 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಲ್ಲಾಜೆ ವಹಿಸಿದ್ದರು. ಪಂಜ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಶಶಿಧರ ಪಳಂಗಾಯ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಕೃಷ್ಣ ಕುಮಾರ್ ರೈ ಸವಣೂರು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ
ಅಶೋಕ್ ನೆಕ್ರಾಜೆ,
ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಸಂಚಾಲಕ
ಚಂದ್ರಶೇಖರ್ ನಾಯರ್,
ರೈತ ಯುವಕ ಮಂಡಲದ ಗೌರವಾಧ್ಯಕ್ಷ ಮನುದೇವ್ ಪರಮಲೆ , ಹಾಲಿ ಅಧ್ಯಕ್ಷ
ಜೀವಿತ್ ಪರಮಲೆ , ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಮೋಹನ್ ಗೌಡ ಕೋಟಿಗೌಡನ ಮನೆ, ಜಯಂತಿ ಪರಮಲೆ, ಭವ್ಯ ಜೇನುಕೋಡಿ, ಸ ಹಿ ಪ್ರಾ ಶಾಲೆ ಏನೆಕಲ್ ಇದರ ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಪರಮಲೆ , ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನಳಿನಿ ಪರಮಲೆ , ಕೊಲ್ಲಮೊಗ್ರ ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್, ಏನೇಕಲ್ಲು ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಯಮುನಾ ಪುಂಡಿಗದ್ದೆ , ಸಂಘಟನಾ ಸಮಿತಿ ಅಧ್ಯಕ್ಷರು ಪ್ರಹ್ಲಾದ ಪರ್ಲಾ ಉಪಸ್ಥಿತರಿದ್ದರು.
ಶಿವರಾಮ್ ಚಿದ್ಗಲ್ ಸ್ವಾಗತಿಸಿ,
ಯಮುನಾ ಪುಂಡಿಗದ್ದೆ ವಂದಿಸಿದರು. ಜೀವಿತಾ ಸುಧೀರ್ ತೋಟ ಕಾರ್ಯಕ್ರಮ ನಿರೂಪಿಸಿದರು.