ಅಧಿವಕ್ತಾ ಪರಿಷತ್ ವತಿಯಿಂದ ಗುರುವಂದನಾ ಕಾರ್ಯಕ್ರಮ

0

ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಸುಳ್ಯ ಘಟಕದ ಸಹಯೋಗದೊಂದಿಗೆ ಸುಳ್ಯದ ಎ ಪಿ ಎಂ ಸಿ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಜು.19 ನಡೆಯಿತು.

ಸುಳ್ಯ ವಕೀಲರ ಸಂಘದ ಇಬ್ಬರು ಹಿರಿಯ ನ್ಯಾಯವಾದಿಗಳಿಗೆ ಗೌರವಿಸುವ ಮೂಲಕ ಗುರುವಂದನೆಯನ್ನು ಮಾಡಲಾಯಿತು. ಸುಳ್ಯ ವಕೀಲರ ಸಂಘದ ‌ಹಿರಿಯ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿ ಇವರಿಗೆ ಕಾರ್ಯಕ್ರಮ ದಲ್ಲಿ ಮತ್ತು,
ಎ ಸಿ ನಂದನ್ ಇವರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.
ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾದ ಅನಿಲ್ ಕುಮಾರ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದು, ಚಂದ್ರಶೇಖರ ಈಶ್ವರಮಂಗಲ, ಅಧ್ಯಾಪಕರು ಪುತ್ತೂರು ಇವರು ಗುರು ಮತ್ತು ಗುರುವಂದನಾ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು.

ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗಳಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಬಂಟ್ವಾಳದ ನ್ಯಾಯವಾದಿ ಶ್ರೀಮತಿ ಉಮಾ ಸೋಮಯಾಜಿ, ಸುಳ್ಯ ಘಟಕದ ಅಧ್ಯಕ್ಷರಾದ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು , ಅಥಿತಿಗಳಾಗಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಸುಳ್ಯದ ನ್ಯಾಯವಾದಿ ಜಗದೀಶ್ ಡಿ.ಪಿ. ಪ್ರಾಸ್ತಾವಿಕ ಮಾತನಾಡಿ, ಅಧಿವಕ್ತಾ ಪರಿಷತ್ತಿನ ಸುಳ್ಯ ಘಟಕದ ಅಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿ, ಅಧಿವಕ್ತಾ ಪರಿಷತ್ತಿನ ಸುಳ್ಯ ಘಟಕದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರಂಜಿತ್ ಕುಕ್ಕೇಟಿ ವಂದಿಸಿದರು. ನ್ಯಾಯವಾದಿ ಸವಿತಾ ಎಂ ಡಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ವಕೀಲರ ಸಂಘದ ಹಿರಿಯ ನ್ಯಾಯವಾದಿಳಾದ ರವೀಂದ್ರನಾಥ ರೈ, ಎನ್ ಜಯಪ್ರಕಾಶ್ ರೈ, ರಾಮಕೃಷ್ಣ ಎ, ದಯಾಕರ ಆಳ್ವ, ಅಧಿವಕ್ತಾ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಮಂಗಳೂರಿನ ನ್ಯಾಯವಾದಿ ಜಗದೀಶ್ ಕೆ ಆರ್,ಮಂಗಳೂರು ವಿಭಾಗ ಸಂಚಾಲಕರಾದ ಪುತ್ತೂರು ನ್ಯಾಯವಾದಿ ಚೇತನ್ ನಾಯಕ್, ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಪುತ್ತೂರು ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ, ಜಿಲ್ಲಾ ಕಾರ್ಯದರ್ಶಿ ಮೂಡಬಿದಿರೆ ನ್ಯಾಯವಾದಿ ಜಯಪ್ರಕಾಶ್ ಭಂಡಾರಿ, ಹಾಗೂ ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ಅಧಿವಕ್ತಾ ಪರಿಷತ್ತಿನ ಮಂಗಳೂರು, ಬಂಟ್ವಾಳ, ಮೂಡ‌ಬಿದಿರೆ, ಪುತ್ತೂರು, ಸುಳ್ಯ ಘಟಕದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.