















ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಸಹಕಾರದೊಂದಿಗೆ ಪರಿಸರ ಜಾಗೃತಿಯಾನ ಮತ್ತು ಪರಿಸರ ಗೀತೆ ಗಾಯನ ಕಾರ್ಯಕ್ರಮವು ಜುಲೈ ೨೧ರಂದು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ನಡೆಯಿತು. ಸುಳ್ಯ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲುರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷರಾಗಿರುವ ರೊ.ಡಾ.ರಾಮ ಮೋಹನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಅರಿವಿನ ದೀಪ ಬೆಳಗಲಿ ಎಂದು ಶುಭ ಹಾರೈಸಿದರು.

ತೇಜಸ್ವಿ ಕಡಪಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯ ಸಂರಕ್ಷಣಾಕಾರ ಭುವನೇಶ್ ಕೈಕಂಬ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವನ್ಯಜೀವಿಗಳು ಮತ್ತು ಪರಿಸರದ ಅವಿನಾಭಾವ ಸಂಬಂಧ ಹಾಗು ಪರಿಸರದ ಅನನ್ಯ ವಿಸ್ಮಯಗಳ ಬಗ್ಗೆ ಮಾಹಿತಿ ನೀಡಿದರು.
ಪೆರ್ನಾಜೆ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗದವರಿಂದ ಪರಿಸರಗೀತೆ ಗಾಯನವು ನಡೆಯಿತು. ರೋಟರಿ ಕ್ಲಬ್ ಸುಳ್ಯದ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ.ಪಿಪಿ ಪಿಹೆಚ್‌ಎಫ್ ಪ್ರಭಾಕರನ್ ನಾಯರ್, ದ.ಕ ಜಿಲ್ಲಾ ಸಾಹಿತ್ಯ ಪ್ರತಿನಿಧಿಗಳಾದ ರಾಮಚಂದ್ರ ಪಲ್ಲತಡ್ಕ, ಮೊದಲಾದವರು ಉಪಸ್ಥಿತರಿದ್ದರು. ರೊ.ದಯಾನಂದ ಆಳ್ವರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾಲೇಜಿನ ವಿದ್ಯಾರ್ಥಿನಿಯರಾದ ಕು.ಭಾನವಿ, ಕು.ಅವನಿ,ಕು.ಯಶಸ್ವಿ ಅವರು ಪ್ರಾರ್ಥಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಅವರು ವಂದಿಸಿದರು.ಉಪನ್ಯಾಸಕಿಯರಾದ ಶ್ರೀಮತಿ ಜಯಮಾಲಾ ಮತ್ತು ಕು.ದೀಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.










