














ಇಂದು ಮೃತರಾದ ಚಂದ್ರಲಿಂಗಂ ರವರು ಐವರ್ನಾಡಿನ ಗ್ರಾಮ ಪಂಚಾಯಿತಿ ಸದಸ್ಯರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ ಬಳಿಕ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡಿದ ಒಬ್ಬ ಗಟ್ಟಿ ಸ್ವರದ ನಾಯಕನಾಗಿದ್ದರು, ಇವರು ಒಬ್ಬ ತಮಿಳು ಕಾರ್ಮಿಕ ನಾಯಕನಾಗಿ ತಮಿಳು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಪಾರ ಅರಿವು ಅನುಭವವನ್ನು ಹೊಂದಿದ್ದು, ಸಮಸ್ಯೆಯನ್ನು ಗ್ರಾಮ ಮಟ್ಟದಿಂದ ಮುಖ್ಯಮಂತ್ರಿಗಳ ತನಕ ಕೊಂಡೋಗಿ ಅದಕ್ಕೆ ಪರಿಹಾರ ಕಂಡುಕೊಂಡ ಒಬ್ಬ ತಮಿಳು ನಾಯಕನಾಗಿದ್ದವರು. ಇವರ ಹೋರಾಟದಿಂದ ತಮಿಳರ ಬಹು ದೊಡ್ಡ ಬೇಡಿಕೆಯಾದ ಜಾತಿ ಸರ್ಟಿಫಿಕೇಟ್ ಪಡೆದುಕೊಳ್ಳುವಲ್ಲಿ ಯಶಸ್ಸನ್ನ ಕಂಡುಕೊಂಡವರು. ಹಾಗಾಗಿ ಇವರ ಅಗಲುವಿಕೆಯಿಂದ ಇಡೀ ತಮಿಳು ಜನಾಂಗಕ್ಕೆ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಕೂಡ ತುಂಬಲಾರದ ನಷ್ಟ ಉಂಟಾಗಿದ್ದು ಇವರ ನಿಧನಕ್ಕೆ ನಾನು ಈ ಮೂಲಕ ಅತೀವ ದುಃಖವನ್ನು ವ್ಯಕ್ತಪಡಿಸುತ್ತಿದ್ದು ಅವರ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ನೀಡಲಿ ಮತ್ತು ಇವರ ಹಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮನು ಅವರ ಕುಟುಂಬದವರಿಗೆ ಮತ್ತು ಅವರ ಹಿತೈಷಿಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ಎಂದು
ಸುಳ್ಯ ನಗರ ಪಂಚಾಯತ್ ಸದಸ್ಯರು ,ನ್ಯಾಯವಾದಿ ಎಂ.ವೆಂಕಪ್ಪ ಗೌಡ ಸಂತಾಪ ಸೂಚಿಸಿದ್ದಾರೆ.










