ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ದ ಅಂಬ್ಯಲೆನ್ಸ್‌ ಚಾಲಕ ಹೊನ್ನಪ್ಪ ದೇವರಗದ್ದೆ ನಾಪತ್ತೆ

0

ದೂರು ದಾಖಲು

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಯೋಗಿ ಹೊನ್ನಪ್ಪ ದೇವರಗದ್ದೆ ನಾಪತ್ತೆ ಆಗಿರುವುದಾಗಿ ಸುಬ್ರಹ್ಮಣ್ಯ ಠಾಣೆಯಲ್ಕಿ ದೂರು ದಾಖಲಾದ ಘಟನೆ ವರದಿಯಾಗಿದೆ.

52 ವರ್ಷ ಪ್ರಾಯದ ಹೊನ್ಬಪ್ಪ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಬ್ಯಲೆನ್ಸ್‌ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡದ್ದು. ಜು.22 ಅಂಬ್ಯಲೆನ್ಸ್‌ ಚಾಲಕ ಕೆಲಸಕ್ಕೆ ಮನೆಯಿಂದ ಬೆಳಗ್ಗೆ 09.00 ಗಂಟೆಗೆ ಹೋಗಿದ್ದು, ನಂತರ ಪಿರ್ಯಾದುದಾರರು ಮನೆಯಲ್ಲಿ ಗಂಡ ಮೊಬೈಲ್‌ ಬಿಟ್ಟು ಹೋಗಿದ್ದನ್ನು ನೋಡಿ ಗಂಡ ಕೆಲಸ ಮಾಡುವ ಸುಬ್ರಹ್ಮಣ್ಯ ಆಸ್ಪತ್ರೆಯ ಸಿಬ್ಬಂದಿಯವರಿಗೆ ಫೋನ್‌ ಮಾಡಿ ಮನೆಯಲ್ಲಿಯೇ ಫೋನ್‌ ಬಿಟ್ಟು ಬಂದಿದ್ದು ಅವರಿಗೆ ತಿಳಿಸಿ ಎಂದು ಹೇಳಿದ್ದು, ನಂತರ ಆಸ್ಪತ್ರೆಯ ಸಿಬ್ಬಂದಿಗಳು ಹೊನ್ನಪ್ಪರವರು ಈ ದಿನ ರಜೆ ಹಾಕಿ ಆಸ್ಪತ್ರೆಯಿಂದ ಹೋಗಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾದುದಾರರ ಗಂಡ ಮದ್ಯಾಹ್ನ ವಾದರೂ ಮನೆಗೆ ಬಾರದೇ ಇರುವುದರಿಂದ ಆಸ್ಪತ್ರೆಗೆ ಪೋನ್‌ ಮಾಡಿ ವಿಚಾರಿಸಿದಾಗ ಆಸ್ಪತ್ರೆಯಲ್ಲಿಯೇ ಗಂಡ ಚಲಾಯಿಸುವ ಸ್ಕೂಟಿ ವಾಹನವನ್ನು ಬಿಟ್ಟು ಹೋಗಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾದುದಾರರಿಗೆ ಭಯವಾಗಿ ವಿಷಯವನ್ನು ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಿಳಿಸಿದ್ದು, ಹಾಗೂ ಗಂಡ ಕಾಣೆಯಾದ ಬಗ್ಗೆ ಊರಿನ ಗ್ರಾಮಸ್ಥರಿಗೂ ತಿಳಿದು ಎಲ್ಲಾ ಕಡೆ ಹುಡುಕಾಟ ಮಾಡಿದರೂ ಪತ್ತೆಯಾಗಿರುವುದಿಲ್ಲ. ನಂತರ ಸುಬ್ರಹ್ಮಣ್ಯ ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನದ ಸಿಸಿ ಕ್ಯಾಮರವನ್ನು ಪರಿಶೀಲಿಸಿದಾಗ ಪಿರ್ಯಾದುದಾರರ ಗಂಡ ಕುಮಾರಧಾರ ನದಿ ಕಡೆಗೆ ಹೋಗುತ್ತಿರುವುದು ಕಂಡು ಬಂದಿದ್ದು, ನಂತರ ನದಿ ದಡದಲ್ಲಿ ಮತ್ತು ಸುತ್ತಮುತ್ತ ಹುಡುಕಾಟ ಮಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಗಂಡ ಹೊನ್ನಪ್ಪ ಅವರನ್ನು ಹುಡುಕಿ ಕೊಡುವಂತೆ ಪತ್ನಿಯ ದೂರಿನಲ್ಲಿ ತಿಳಿಸಲಾಗಿದೆ.