ಮಾನ್ಯ ಡೆವಲಪ್ಪರ್ಸ್ ಸುಳ್ಯ ಇವರಿಂದ ಸೇವಾಜೆ ಸ.ಕಿ.ಪ್ರಾ ಶಾಲೆ ಹಾಗೂ ಸೇವಾಜೆ ಅಂಗನವಾಡಿಗೆ ಕಲಿಕಾ ಸಾಮಗ್ರಿಗಳ ಕೊಡುಗೆ

0

ಮಾನ್ಯ ಡೆವಲಪ್ಪರ್ಸ್ ಸುಳ್ಯ ಇದರ ಮಾಲೀಕರಾದ ಯತೀಶ್ ಗಟ್ಟಿಗಾರು ಹಾಗೂ ಶ್ರೀಮತಿ ಮಣಿಶ್ರೀಯವರು ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಡ್ರಾಯಿಂಗ್ ಸೆಟ್ ಹಾಗೂ ಸೇವಾಜೆ ಅಂಗನವಾಡಿ ಮಕ್ಕಳಿಗೆ ಚೌಕುಳಿ ಪುಸ್ತಕ, ಲಾಡ್ಡೆರ್ ಆಲ್ ಇನ್ ಒನ್ ಪುಸ್ತಕವನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಎಸ್.ಕೆ.ಆರ್.ಡಿ.ಪಿ. ಗುತ್ತಿಗಾರು ವಲಯ ಅಧ್ಯಕ್ಷರಾದ ಯೋಗೀಶ್ ದೇವ, ಶಾಲಾ ಮುಖ್ಯಶಿಕ್ಷಕರು, ಅಂಗನವಾಡಿ ಶಿಕ್ಷಕರು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರು ಶ್ರಿಮತಿ ಪ್ರಮೀಳಾರವರು ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ರೇಣುಕಾ ರವರು ಧನ್ಯವಾದ ತಿಳಿಸಿದರು.