ದಾಖಲೆ ಪತ್ರಗಳಿದ್ದ ಪರ್ಸ್ ಬಿದ್ದುಹೋಗಿದೆ

0

ಭಾರತೀಯ ಸೇನೆಯ ನಿವೃತ್ತ ಯೋಧ ಮಡಿಕೇರಿ ನಿವಾಸಿಯಾಗಿರುವ ಅಶೋಕ್ ಬಿ.ಎಂ. ಎಂಬವರ ದಾಖಲೆ ಪತ್ರಗಳಿದ್ದ ಪರ್ಸ್ ಸುಳ್ಯದಲ್ಲಿ ಬಿದ್ದು ಹೋಗಿರುವುದಾಗಿ ತಿಳಿದುಬಂದಿದೆ.

ಜು.22ರಂದು ಬೆಳಗ್ಗೆ ಸುಳ್ಯಕ್ಕೆ ಬಂದಿದ್ದ ಅವರು ಹಳೆಗೇಟಿನಲ್ಲಿ ಹೋಟೆಲ್ ಗೆ ಹೋಗಿದ್ದರು. ಬಳಿಕ ನೋಡುವಾಗ ಪರ್ಸ್ ಇರಲಿಲ್ಲ. ಅದರಲ್ಲಿ ಆರ್.ಸಿ., ಐಡಿ ಗಳು ಸೇರಿದಂತೆ ದಾಖಲೆ ಪತ್ರಗಳಿತ್ತೆಂದು ತಿಳಿದುಬಂದಿದೆ. ಸಿಕ್ಕಿದವರು ಸುಳ್ಯ ಸುದ್ದಿ ಬಿಡುಗಡೆ ಕಚೇರಿಗೆ ತಲುಪಿಸುವಂತೆ ಅವರು ವಿನಂತಿಸಿದ್ದಾರೆ.