














ಜ್ಯೋತಿ ಪ್ರೌಢ ಶಾಲೆ ಪೆರಾಜೆ ಇಲ್ಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಮೂಲಕ ರಚಿಸಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರವನ್ನು ನಡೆಸಲಾಯಿತು.

ಶಾಲಾ ನಾಯಕಿಯಾಗಿ ಹಿತಾಶ್ರೀ ಪಿ. ಆರ್., ಉಪನಾಯಕ ಪುನಿತ್ ಕೆ., ವಿರೋಧ ಪಕ್ಷದ ನಾಯಕ ರಜತ್ ಪಿ. ಎಸ್., ಸಭಾಪತಿಯಾಗಿ ಸಜಿತ್ ಕೆ. ಪಿ., ಸಾಂಸ್ಕ್ರತಿಕ ಮಂತ್ರಿ ಧನುಷ್ ಗೌಡ, ಉಪ ಸಾಂಸ್ಕ್ರತಿಕ ಮಂತ್ರಿ ಡೀಕ್ಷಾ, ಕ್ರೀಡಾಮಂತ್ರಿ ಆಕಾಶ್ ಎಸ್., ಉಪ ಕ್ರೀಡಾಮಂತ್ರಿ ಮನ್ವಿತ್ ಪಿ., ಶಿಕ್ಷಣ ಮಂತ್ರಿ ಚಿನ್ಮಯಿ ಕೆ. ಎಲ್., ಉಪ ಶಿಕ್ಷಣ ಮಂತ್ರಿ ಜಿತನ್, ಗೃಹಮಂತ್ರಿ ನಿತಿನ್ ವಿ., ಉಪ ಗೃಹಮಂತ್ರಿ ತೀರ್ಥ, ನೀರಾವರಿ ಜ್ಞಾನೇಶ್, ಉಪ ನೀರಾವರಿ ಆದರ್ಶ ಡಿ. ಟಿ., ಆಹಾರ ಮಂತ್ರಿ ಡೀನಾ ಕೆ. ಜಿ., ಉಪ ಆಹಾರ ಮಂತ್ರಿ ರಕ್ಷಿತಾ ಪಿ. ಸಿ. ಆಯ್ಕೆಯಾದರು.
ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಮಹೇಶ್ ಕುಮಾರ್ ಮೇನಾಲರವರು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಕಛೇರಿ ನಿರ್ವಾಹಕರಾದ ಶ್ರೀಮತಿ ಚಂದ್ರಮತಿ ಪ್ರತಿಜ್ಞಾವಿಧಿ ಭೋದಿಸಿದರು. ಮುಖ್ಯ ಶಿಕ್ಷಕ ಜಿ. ಆರ್. ನಾಗರಾಜ್ ಚುನಾವಣೆಯ ಮಹತ್ವವನ್ನು ಹಾಗು ಮಂತ್ರಿಗಳ ಜವಾಬ್ಧಾರಿಯನ್ನು ವಿವರಿಸಿದರು.ಕಾರ್ಯಕ್ರಮ ಆಯೋಜನೆಯನ್ನು ಪ್ರೌಢಶಾಲಾ ಎಲ್ಲಾ ಶಿಕ್ಷಕ ವೃಂದದವರು ವಹಿಸಿದ್ದರು.










