ಜಾಲ್ಸೂರು ಗ್ರಾಮ ವ್ಯಾಪ್ತಿಯ ಆರ್ತಾಜೆ ಎಂಬಲ್ಲಿ ಲೋಕೋಪಯೋಗಿ ರಸ್ತೆಯ ಪಕ್ಕದಲ್ಲಿರುವ ತೆಂಗಿನ ಮರ ಸಹಿತ ಬರೆ ಕುಸಿದು, ಚರಂಡಿ ಬ್ಲಾಕ್ ಆಗಿರುವುದನ್ನು ಇಲಾಖೆ ತಿಳಿಸಲಾಗಿದೆ ಎಂದು ಜಾಲ್ಸೂರು ಗ್ರಾಮ ಪಂಚಾಯತಿ ಮಾಹಿತಿ ನೀಡಿದೆ.















ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಸಾರ ವಾದಂತೆ ಜಾಲ್ಸೂರು ಗ್ರಾ.ಪಂ. ಸುದ್ದಿಗೆ ಪ್ರತಿಕ್ರಿಯೆ ನೀಡಿದೆ.
10 ದಿನಗಳ ಹಿಂದೆ ತೆಂಗಿನ ಮತ ಹಿತ ಬರೆ ಜರಿದಿದೆ. ನಮಗೆ ಈ ಕುರಿತು ದೂರು ಬಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಇರುವುದರಿಂದ ಪಂಚಾಯತ್ ವತಿಯಿಂದ ಸುಳ್ಯ ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಮಣ್ಣು ತೆಗೆಸುವುದಾಗಿ ಹೇಳಿದ್ದಾರೆ. ನಾವು ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದು ಚರಂಡಿ ಸರಿಪಡಿಸುವಂತೆ ಹೇಳುತ್ತಿದ್ದೇವೆ” ಎಂದು ಗ್ರಾಮ ಪಂಚಾಯತ್ ಮಾಹಿತಿ ನೀಡಿದೆ.










