ಸಾಧಕರಿಗೆ ಸನ್ಮಾನ, ವಿವಿಧ ಕೊಡುಗೆಗಳ ಹಸ್ತಾಂತರ, ಸದಸ್ಯರ ಸೇರ್ಪಡೆ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ 2025 – 26ನೇ ಸಾಲಿನ ನೂತನ ಅಧ್ಯಕ್ಷ ವಿಶ್ವನಾಥ ಕೆ.ಯವರ ತಂಡದ ಪದಗ್ರಹಣ ಸಮಾರಂಭವು ಜು.22 ರಂದು ಬೆಳ್ಳಾರೆ ದೇವಿ ಹೈಟ್ಸ್ ನ ಸಭಾಂಗಣದಲ್ಲಿ ನಡೆಯಿತು. ಪಿ.ಡಿ.ಜಿ. ಮೇಜರ್ ಡೋನರ್ ರೊ.ದೇವದಾಸ್ ರೈ ಪದಪ್ರದಾನ ನೆರವೇರಿಸಿದರು. ಬೆಳ್ಳಾರೆ ರೋಟರಿ ಕ್ಲಬ್ ನಿರಂತರವಾಗಿ ಸಮಾಜಮುಖಿಯಾಗಿ ಕೆಲಸಗಳನ್ನು ಮಾಡುತ್ತಿದೆ. ಹಲವಾರು ಕೊಡುಗೆಗಳನ್ನು ನೀಡುತ್ತಾ ಕ್ಲಬ್ ಉನ್ನತ ಸ್ಥಾನದಲ್ಲಿದೆ. ಕಳೆದ ಸಾಲಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸುವ ಮೂಲಕ ಬೆಳ್ಳಾರೆ ರೋಟರಿ ಕ್ಲಬ್ ಉತ್ತಮ ಸಾಧನೆಯನ್ನು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ರೊ.ಚಂದ್ರಶೇಖರ ರೈಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು. ಪದಪ್ರದಾನ ನಡೆದ ಬಳಿಕ ನೂತನ ಅಧ್ಯಕ್ಷ ವಿಶ್ವನಾಥ ಕೆ.ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮುಂದುವರಿಯಿತು.

ನೂತನ ಅಧ್ಯಕ್ಷ ವಿಶ್ವನಾಥ ಕೆ., ಕಾರ್ಯದರ್ಶಿ ವೀರನಾಥ ಎಂ., ಕೋಶಾಧಿಕಾರಿ ಅಬ್ದುಲ್ ರಹಮಾನ್, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ರೊ.ನವೀನ ರೈ ತಂಬಿನಮಕ್ಕಿ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ರೊ.ಪ್ರಶಾಂತ್ ,ಕಮ್ಯುನಿಟಿ ಸರ್ವಿಸ್ ನಿರ್ದೇಶಕರಾಗಿ ರೊ. ಬಾಲಕೃಷ್ಣ ಮಡ್ತಿಲ, ವೋಕೇಶನಲ್ ಸರ್ವಿಸ್ ನಿರ್ದೇಶಕರಾಗಿ ರೊ.ಗೋಪಾಲಕೃಷ್ಣ, ಯೂತ್ ಸರ್ವಿಸ್ ನಿರ್ದೇಶಕರಾಗಿ ರೊ.ಮುಸ್ತಾಫ, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ರೊ.ನಟರಾಜ ,ಮೆಂಬರ್ ಷಿಪ್ ಡೆವಲಪ್ ಮೆಂಟ್ ಚೆಯರ್ ಮೆನ್ ರೊ.ಪದ್ಮನಾಭ ಬೀಡು, ಟಿ.ಆರ್.ಎಫ್.ಚೆಯರ್ ಮೆನ್ ರೊ.ಶಶಿಧರ ಬಿ.ಕೆ, ಪಬ್ಲಿಕ್ ಇಮೇಜ್ ಚೆಯರ್ ಮೆನ್ ರೊ.ಗಣೇಶ್ ಕುಕ್ಕುದಡಿ, ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ರೊ.ರವೀಂದ್ರ ಮರಕ್ಕಡ ರವರು ಪದ ಸ್ವೀಕಾರ ಮಾಡಿದರು.

ಕ್ಲಬ್ ಗೆ ನೂತನ ಸದಸ್ಯರಾಗಿ ಧನರಾಜ್ ಕಲ್ಲೋಣಿ, ಹನೀಫ್ ಬೆಳ್ಳಾರೆ, ಅನುಷ್ ಎಸ್ ಸೇರ್ಪಡೆಗೊಂಡರು.
ಸಾಧಕರಿಗೆ ಸನ್ಮಾನ
ಬೆಳ್ಳಾರೆಯ ಕಲಾ ಮಂದಿರ್ ನಿರ್ದೇಶಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಮತ್ತು ಐವರ್ನಾಡು ಸ.ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮಾಲತಿಯವರನ್ನು ಶಾಲು ಹೊದಿಸಿ ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಶಾಲಾ, ಕಾಲೇಜುಗಳಲ್ಲಿ ವಿಶೇಷ ಸಾಧನೆ ಮಾಡಿದ ಕ್ಲಬ್ ನ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
















ವಿವಿಧ ಕೊಡುಗೆಗಳ ಹಸ್ತಾಂತರ
ಬೆಳ್ಳಾರೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಸಮವಸ್ತ್ರ ವಿತರಣೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿಯವರು ಹಾಗೂ ಪುಟಾಣಿ ಮಕ್ಕಳು, ಮಕ್ಕಳ ಪೋಷಕರು ಸಮವಸ್ತ್ರ ಸ್ವೀಕರಿಸಿದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಪ್ರಿಂಟರನ್ನು ಕೊಡುಗೆಯಾಗಿ ನೀಡಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾರವರು ಸ್ವೀಕರಿಸಿದರು.
ರೊ.ಪ್ರಸಾದ್ ಕತ್ಲಡ್ಕ, ರೊ.ಸತ್ಯನಾರಾಯಣ, ರೊ.ಮಹಾಬಲ ತಂಟೆಪ್ಪಾಡಿ, ರೊ.ಮೋನಪ್ಪ ತಂಬಿನಮಕ್ಕಿ ಸನ್ಮಾನ ಪತ್ರ ಹಾಗೂ ಅತಿಥಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಝೋನ್ – 5ರ ಅಸಿಸ್ಟೆಂಟ್ ಗವರ್ನರ್ ರೊ.ಪಿ.ಎಚ್.ಎಫ್ ಪ್ರಮೋದ್ ಕುಮಾರ್ ರೈ, ಝೋನಲ್ ಲೆಫ್ಟಿನೆಂಟ್ ಪಿ.ಎಚ್.ಎಫ್.ಶಶಿಧರ ಬಿ.ಕೆ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ.ರಾಮಮೋಹನ ಕೆ.ಎನ್., ಶ್ರೀಮತಿ ಸುಲೋಚನಾ ವಿಶ್ವನಾಥ್
ಉಪಸ್ಥಿತರಿದ್ದರು.
ಕು.ವೈಷ್ಣವಿ ಪ್ರಾರ್ಥಿಸಿ, 2024- 25ನೇ ಸಾಲಿನ ಕಾರ್ಯದರ್ಶಿ ರೊ.ಎ.ಕೆ.ಮಣಿಯಾಣಿ ವರದಿ ವಾಚಿಸಿದರು. ರೊ.ಪ್ರಭಾಕರ ಆಳ್ವ, ರೊ.ಶ್ಯಾಮಸುಂದರ ರೈ, ರೊ.ವಿನಯ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವೀರನಾಥ ಎಂ. ವಂದಿಸಿದರು.










