ಬೆಳ್ಳಾರೆ ಲಕ್ಷ್ಮಿ ಸಂಜೀವಿನಿ ಒಕ್ಕೂಟ ದ ಆಶ್ರಯ ದಲ್ಲಿ ಜೆಂಡರ್ ಮತ್ತು FNHW ಮಾಹಿತಿ ಕಾರ್ಯಕ್ರಮವು ಜು.17 ರಂದು ನಡೆಯಿತು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ರವರು ಜೆಂಡರ್ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾರವರು ಎಫ್.ಎನ್.ಎಚ್.ಡಬ್ಲ್ಯ ಬಗ್ಗೆ ಮತ್ತು ಹದಿಹರೆಯದಲ್ಲಿ ಆಗುವ ಮಾನಸಿಕ ಮತ್ತು ಧೈಹಿಕ ಬದಲಾವಣೆಗಳು, ಆ ಸಮಯದಲ್ಲಿ ಯಾವ ರೀತಿ ತಮ್ಮನ್ನು ತಾವು ದೌರ್ಜನ್ಯದಿಂದ ರಕ್ಷಣೆ ಮಾಡಿಕೊಳ್ಳಬೇಕು,,ಆಹಾರ ಪದ್ದತಿ, ಹೆಣ್ಮಕ್ಕಳ ಆಹಾರ ಪದ್ದತಿ ಕ್ರಮ, ಮುಂತಾದ ವಿಷಯ ಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಸುಜಾತಾರವರು ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದರು.















ಕಾರ್ಯಕ್ರಮ ದಲ್ಲಿ ವಿಶೇಷ ವಾಗಿ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳ್ಳಾರೆ ಗ್ರಾಮ ಪಂಚಾಯತ್ ವಿ.ಆರ್.ಡಬ್ಲ್ಯು ಪುಷ್ಪಾ ಉಪಸ್ಥಿತರಿದ್ದರು.ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಸಭೆ ಯಲ್ಲಿ ಲಿಂಗತ್ವ ಪ್ರತಿಜ್ಞೆ ಮಾಡಿಸಲಾಯಿತು.ಎಂಬಿಕೆ ಮತ್ತು ಎಲ್.ಸಿ.ಆರ್.ಪಿ ಗಳು ಕಾರ್ಯಕ್ರಮ ನಡೆಸಿಕೊಟ್ಟರು.










