
ಸಂಪಾಜೆ , ಚೆಂಬು, ತೊಡಿಕಾನ , ಪೆರಾಜೆ ವ್ಯಾಪ್ತಿಯಲ್ಲಿ ನಿರಂತರ ಆನೆ ಹಾವಳಿ ಹೆಚ್ಚಾಗುತ್ತಿದ್ದು, ಒಂಟಿ ಆನೆ ಯೊಂದು ರಾತ್ರಿ ವೇಳೆ ಚೆಂಬು ಗ್ರಾಮದ ಮಲೆ ಚಾಮುಂಡಿ ದೈವದ ಕಟ್ಟೆಗೆ ಹಾನಿ ಹಾಗೂ ಅಪಾರ ಕೃಷಿ ನಾಶ ಮಾಡಿದ ಘಟನೆ ಸಂಭವಿಸಿದೆ.















ಚೆಂಬು ಗ್ರಾಮದ ಬಾಲಕೃಷ್ಣ ರೈ ಅವರ ಕುಟುಂಬಕ್ಕೆ ಸೇರಿದ ಮಲೆ ಚಾಮುಂಡಿ ದೈವದ ಕಟ್ಟೆಗೆ ರಾತ್ರಿ ವೇಳೆ ಒಂಟಿ ಆನೆ ದಾಳಿ ಮಾಡಿ ದಂತದಿಂದ ಕಟ್ಟೆಯ ಮೇಲಿದ್ದ ಕಲ್ಲನ್ನು ದೂಡಿಹಾಕಿದೆ . ಬಳಿಕ ಅವರ ತೋಟಕ್ಕೆ ನುಗ್ಗಿ ತೆಂಗು, ಬಾಳೆ, ಅಡಿಕೆ ಗಿಡ ಹಾನಿಯಾಗಿದೆ. ಮಾರ್ಪಡ್ಕ ಮಾಯಿಲಪ್ಪ ವರ ಅಡಿಕೆ ತೋಟಕ್ಕೆ ನುಗ್ಗಿ ಸಂಪೂರ್ಣ ಕೃಷಿ ಹಾನಿ ಮಾಡಿದೆ. ಇದರಿಂದ ಕೃಷಿಕರು ಆತಂಕಕ್ಕೆ ಒಳಗಾಗಿದ್ದು, ಸಂಬಂಧ ಪಟ್ಟ ಅರಣ್ಯಾಧಿಕಾರಿಗಳು ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ನೀಡಬೇಕಾಗಿ ಹೇಳಿಕೊಂಡಿದ್ದಾರೆ.










