ಅಲೆಟ್ಟಿ ಪಂಚಾಯತ್ ಎದುರಿನಲ್ಲಿ ಹಾವು ಕಡಿತದ ಕುರಿತು ಜಾಗೃತಿ ಬೀದಿ ನಾಟಕ

0

ಅಲೆಟ್ಟಿ ಗ್ರಾಮ ಪಂಚಾಯತ್ ವಠಾರದಲ್ಲಿ ಹಾವು ಕಡಿತ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂಬ ಸಂದೇಶ ಸಾರುವ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ಸರಕಾರದ ಅನುಮತಿ ಪಡೆದ ಖಾಸಗಿ ಮ್ಯಾನಕಿಂಡ್ ಸಂಸ್ಥೆ ಯವರ ನೇತೃತ್ವದಲ್ಲಿ ಹಾವಿನೊಂದಿಗೆ ಸಮರ ಆಸ್ಪತ್ರೆಯಲ್ಲಿ ಉಪಚಾರ ಎಂಬ ಸಂದೇಶದ ಜಾಗೃತಿ ಮೂಡಿಸುವ ಬೀದಿ ನಾಟಕ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಪಾಲ್ಗೊಂಡರು.