ಆಮಂತ್ರಣ ಪತ್ರಿಕೆ ಬಿಡುಗಡೆ
ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ನೂತನ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ಕಾರ್ಯಕ್ರಮವು ಆ. ೧೫ರಿಂದ ಆ.೧೮ರವರಗೆ ನಡೆಯಲಿದೆ.















ಇದರ ಆಮಂತ್ರಣ ಪತ್ರಿಕೆಯನ್ನು ವಾರದ ವಿಶೇಷ ಭಜನೆಯೊಂದಿಗೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ತಲು, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಕೋಶಾಧಿಕಾರಿ ಶ್ರೀಮತಿ ಲೀಲಾವತಿ ನಡುಮನೆ, ಸದಸ್ಯರುಗಳಾದ ಶ್ರೀಮತಿ ಪುಷ್ಪಾವತಿ ನಡುಮನೆ, ಶ್ರೀಮತಿ ಮೋಹಿನಿ ನಡುಮನೆ, ಕು.ರಕ್ಷಿತ್, ಕು.ಹೇಮಂತ್, ಕು.ಹಂಶಿಖ, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ ಉಪಸ್ಥಿತರಿದ್ದರು.










