ಸಿ.ಸಿ.ಆರ್.ಟಿ. ಸ್ಕಾಲರ್ ಶಿಪ್ ಗೆ ಆಯ್ಕೆಯಾದ ಆದ್ಯತಾ ಅಡಿಕೆಹಿತ್ತಿಲು

0

ಕು. ಆದ್ಯತಾ ಎಂ. ಅಡಿಕೆಹಿತ್ತಿಲು ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಯಲ್ಲಿ ಕೇಂದ್ರ ಸರಕಾರದ CCRT ಯಡಿಯಲ್ಲಿ ನಡೆದ ಸೆಂಟ್ರಲ್ ಟ್ಯಾಲೆಂಟ್ ಸರ್ಚ್ ಸ್ಕಾಲರ್ ಶಿಪ್ 2024-25 ರ ಸಂದರ್ಶನದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಅವಾರ್ಡ್ ಆಪ್ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

ಈಕೆ ಸುನಾದ ಸಂಗೀತ ಕಲಾ ಶಾಲೆಯ ವಿದ್ವಾನ್ ಕಾಂಚನ ಈಶ್ವರ ಭಟ್ ಪುತ್ತೂರು ಇವರ ಶಿಷ್ಯೆಯಾಗಿದ್ದು, ವಸಂತ ಕುಮಾರ ಅಡಿಕೆಹಿತ್ತಿಲು ಮತ್ತು ಅಖಿಲಾ ದಂಪತಿಯ ಸುಪುತ್ರಿ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 9ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.