ಕಲ್ಲುಗುಂಡಿಯ ಪೆಟ್ರೋಲ್ ಪಂಪ್ ಮುಂಭಾಗ ಇರುವ
ನಂದಿನಿ ಬಿಲ್ಡಿಂಗ್ ನಲ್ಲಿ ಶ್ರೀಕಾಂತ್ ಮತ್ತು ಮಂಜೇಶ್ ಮಾಲಕತ್ವದ ಮೊಬೈಲ್ ಅಂಗಡಿ ಸ್ಕಂದ ಮೊಬೈಲ್ ಜು.25 ರಂದು ಶುಭಾರಂಭಗೊಂಡಿತು.
















ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿ ವೇಲು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು . ಸಂಪಾಜೆ ಪ್ರಾಥಮಿಕ ಕೃಷಿ ಕೃಷಿ ಪತ್ತಿನ ಅಧ್ಯಕ್ಷ ಸೋಮಶೇಖರ ಕೊಯಿoಗಾಜೆ , ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಬಳಿಕ ಸಂಸ್ಥೆ ವತಿಯಿಂದ ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ನವಮಿ ಸ್ಟೋರ್ ಮಾಲಿಕ ಯು. ಬಿ ಚಕ್ರಪಾಣಿ, ಕಲ್ಲುಗುಂಡಿ ಇಂಡಿಯನ್ ಆಯಿಲ್ ಪಂಪ್ ನ ಮಾಲಿಕ ಕಿಶೋರ್ ಕುಮಾರ್ ಪಿ. ಬಿ, ಕರ್ನಾಟಕ ಕಟ್ಟಡ ನಿರ್ಮಾಣ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯ ಕೆ. ಪಿ ಜಾನಿ , ಸೌಭಾಗ್ಯ ಹಾರ್ಡ್ ವೇರ್ ಮಾಲಿಕ ಸುಜಿತ್ ಕುಮಾರ್ , ವಸಂತ ಪೆಲ್ತಡ್ಕ, ಏ. ಕೆ ಇಬ್ರಾಹಿಂ, ನಂದಿನಿ ಬಿಲ್ಡಿಂಗ್ ಮಾಲಿಕ ಸಚ್ಚಿ ದಾನಂದ ಕಲ್ಲುಗುಂಡಿ, ಅಕ್ಷತಾ ಟಿ, , ದಿನೇಶ್, ವಿಲ್ಸನ್ , ನಿತಿನ್ ಗೂನಡ್ಕ , ಸಂಭ್ರಮ ಎಲೆಕ್ಟ್ರಾನಿಕ್ಸ್ ಮಾಲಕ ರೋಹಿತ್ ಅಬೀರ , ಸ್ನೇಹಿತರು ಮೊದಲಾದವರು ಉಪಸ್ಥಿತರಿದ್ದರು.

ನಮ್ಮಲ್ಲಿ ಎಲ್ಲಾ ತರಹದ ಕಂಪೆನಿಯ ಮೊಬೈಲ್ ಲಭ್ಯ, ಎಕ್ಸಚೇಂಜ್ ಆಫರ್, ಡಿಸ್ಕೌಂಟ್ ಲಭ್ಯವಿದೆ. ಅಲ್ಲದೇ ಮೊಬೈಲ್, ಟಿವಿ ರಿಚಾರ್ಜ್ ಮಾಡಲಾಗುವುದು. ಕ್ಲಪ್ತ ಸಮಯದಲ್ಲಿ ಮೊಬೈಲ್ ರಿಪೇರಿ ಮಾಡಲಾಗುವುದು. ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










