ಕಳೆದ ಮೂರು ದಿನಗಳಿಂದ ನೀರಿನಲ್ಲಿ ಮುಳುಗಿದ್ದ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ಗೌಡ ಅವರ ದೇಹವನ್ನು ಕುಮಾರಧಾರ ನದಿಯಲ್ಲಿ ಹುಡುಕಾಟ ನಡೆಸಿ ಯಶಸ್ವಿಯಾದ ಈಶ್ವರ ಮಲ್ಪೆ ತಂಡವನ್ನು ಸುಬಹ್ಮಣ್ಯ ಗ್ರಾ. ಪಂ. ಬಳಿ ಗೌರವಿಸಿ ಗೌರವ ಧನವನ್ನು ನೀಡಲಾಯಿತು.















ಗ್ರಾ.ಪಂ ಉಪಾಧ್ಯಕ್ಷರಾದ ರಾಜೇಶ್ ಎನ್ .ಎಸ್. ರವರ ನೇತೃತ್ವದಲ್ಲಿ ಪಂಚಾಯಿತಿನ ಮುಂಭಾಗ ಸನ್ಮಾನಿಸಲಾಯಿತು. ಈಶ್ವರ್ ಮಲ್ಪೆ ಅವರಿಗೆ ಪಂಚಾಯತ್ ವತಿಯಿಂದ ರೂ ೧೦,೦೦೦ ದಿನೇಶ್ ಮೊಗ್ರ, ಉದಯ ನೂಚಿಲ, ಐನೆಕಿದು ಸುಬ್ರಹ್ಮಣ್ಯ ಸಹಕಾರಿ ಬ್ಯಾಂಕ್ ವತಿಯಿಂದ ತಲಾ ಐದು ಸಾವಿರ ಸೇರಿಸಿ ೨೫ ಸಾವಿರ ನೀಡಿ ಗೌರವಿಸಲಾಯಿತು.
ಈ ಸಂದರ್ಭ ರವಿ ಕಕ್ಕೆಪದವು, ಗಿರೀಶ್ ಆಚಾರ್ಯ, ಲೋಕೇಶ್ ಬಿ.ಎನ್, ಪಿಡಿಒ ಮಹೇಶ್, ಸುಬ್ರಹ್ಮಣ್ಯ ಐನೆಕಿದು ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕಟ್ಟೆಮನೆ, ಮಾದವ ದೇವರಗದ್ದೆ ಮತ್ತಿತರರು ಉಪಸ್ಥಿತರಿದ್ದರು.










