
ರೆಪ್ಕೋ ಬ್ಯಾಂಕ್ ಸುಳ್ಯ
ರಿಪಾಟ್ರಿಯೇಟ್ಸ್ ವೆಲ್ಫೇರ್ ಟ್ರಸ್ಟ್, ಇದರ ಸಹಯೋಗದೊಂದಿಗೆ
ರಿಪಾಟ್ರಿಯೇಟ್ಸ್ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಮತ್ತು ಕ್ಷೇಮಾಭಿವೃದ್ಧಿ ಸಮಾರಂಭವು ಜು.25 ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
















ರೆಪ್ಕೋ ಬ್ಯಾಂಕ್ ಅಧ್ಯಕ್ಷ ಹಾಗೂ ರೆಪ್ಕೋ ಹೋಂ ಫೈನಾನ್ಸ್ ನಿರ್ದೇಶಕ ಇ.ಸಂತಾನಂರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ರಿಪಾಟ್ರಿಯೇಟ್ಸ್ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವೇದಿಕೆಯಲ್ಲಿ ರೆಪ್ಕೋ ಹೋಂ ಫೈನಾನ್ಸ್ ಅಧ್ಯಕ್ಷ ಹಾಗೂ ರೆಪ್ಕೋ ಬ್ಯಾಂಕ್ ನಿರ್ದೇಶಕ ಸಿ.ತಂಗರಾಜು,ಸುಳ್ಯ ರೆಪ್ಕೋ ಬ್ಯಾಂಕ್ ಶಾಖೆಯ ಶಾಖಾಧಿಕಾರಿ ಕಲೈಅರಸನ್ ಉಪಸ್ಥಿತರಿದ್ದರು.

ಕನ್ನದಾಸನ್ ದರ್ಖಾಸ್ತು,ಮಾನಿಷ,ಶಿವಕುಮಾರ್ ಕುಕ್ಕಂದೂರು,ರಾಮಸ್ವಾಮಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರೆಪ್ಕೋ ಡೆಲಿಗೇಟ್ ಸದಸ್ಯರನ್ನು ಗೌರವಿಸಲಾಯಿತು.

ಕಲೈಅರಸನ್ ಸ್ವಾಗತಿಸಿ,
ದೇವದಾಸ್ ಗುತ್ತಿಗಾರು ಪ್ರಾರ್ಥಿಸಿ, ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ದಯಾಳನ್ ಬಾರ್ಪಣೆ,ರಮೇಶ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು.










