ಸುಳ್ಯ ಕಸಬಾ ಗ್ರಾಮದ
ಕೊಯಿಂಗೋಡಿ ದಿ. ಭವಾನಿ ಪ್ರಸಾದ್ ರವರ ಪುತ್ರ ನಿತಿನ್ ಕೊಯಿಂಗೋಡಿಯವರು ಅಸೌಖ್ಯದಿಂದ ಇಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ತಿಳಿದುಬಂದಿದೆ.
ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು.















ಕೆಲ ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅಸೌಖ್ಯ ಉಲ್ಬಣಿಸಿದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ತಾಯಿ ಕವಿತಾ, ಪತ್ನಿ ಶಿಲ್ಪ, ಪುತ್ರ ಪ್ರಿಯಂಷು, ಸಹೋದರ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.










