ಕೋಟೆ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿದ ವಿಜ್ಞಾನ ಪ್ರಯೋಗಾಲಯ ಇದರ ಉದ್ಘಾಟನಾ ಸಮಾರಂಭ ಜುಲೈ 25ರಂದು ನಡೆಯಿತು.

ಪ್ರಯೋಗಾಲಯಕ್ಕೆ ವಿಜ್ಞಾನ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ರೈಟ್ ಟು ಲಿವ್ ಕೋಟೆ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾದ ರಘುರಾಮ ಕೋಟೆಯವರು ರಾಸಾಯನಿಕ ಶಾಸ್ತ್ರ ವಿಭಾಗದ ಕೊಠಡಿಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಬಳಿಕ ದೀಪ ಬೆಳಗಿಸಿ ಪ್ರಯೋಗಾಲಯಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರವರು ಭೌತಶಾಸ್ತ್ರ ವಿಭಾಗದ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಜೀವಶಾಸ್ತ್ರ ವಿಭಾಗದ ಕೊಠಡಿಯನ್ನು ಕಾಲೇಜು ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಲಿಂಗಪ್ಪಗೌಡ ಕೇರ್ಪಳ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಅವರು ಉದ್ಘಾಟಿಸಿದರು.
ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಅಧ್ಯಕ್ಷ ಶಶಿಕಲಾ ನೀರಬಿದಿರೆ ಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೋಟೆ ಫೌಂಡೇಶನ್ ಸಂಸ್ಥಾಪಕ ರಘುರಾಮ ಕೋಟೆ ಯವರು ಮಾತನಾಡಿ ‘ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರ ವಾಗಿದೆ.ಇಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸುವ ಕಾರ್ಯವನ್ನು ಮಾಡುತ್ತಾರೆ. ಇಂತಹ ಸಂಸ್ಥೆಗಳಿಗೆ ಯೋಜನೆಗಳನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಒಂದು ನಿಟ್ಟಿನಲ್ಲಿ ನಮ್ಮ ತಂದೆಯವರಾದ ವಸಂತ ಕೋಟೆ ಯವರ ಜ್ಞಾಪಕಾರ್ಥಕವಾಗಿ ಕೋಟೆ ಫೌಂಡೇಶನ್ ಈ ರೀತಿಯ ಚಾರಿಟಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೆಲಸ ಕಾರ್ಯಗಳು ಮಾಡುತ್ತಾ ಬರುತ್ತಿದೆ.
ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸ ಬೇಕೆಂದು ಹೇಳಿದರು.
ಎಂ ಬಿ ಫೌಂಡೇಶನ್ ಇದರ ಅಧ್ಯಕ್ಷ ಎಂ ಬಿ ಸದಾಶಿವ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ರವರು ಈ ಸಂದರ್ಭದಲ್ಲಿ ಶುಭ ಹಾರೈಸಿ ಮಾತನಾಡಿ ‘ವಿದ್ಯಾರ್ಥಿಗಳ ಕಲಿಕೆ ಮತ್ತು ಅವರ ಪ್ರೋತ್ಸಾಹಕ್ಕಾಗಿ ಕೋಟೆ ಫೌಂಡೇಶನ್ ಎಂಬ ಸಂಸ್ಥೆಯು ಧಾನಿಗಳ ರೂಪದಲ್ಲಿ ರಾಜ್ಯಾದ್ಯಂತ ನೂರಾರು ಶಾಲೆಗಳಿಗೆ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳನ್ನು ಪ್ರೋತ್ಸಾಹ ಮೂಲಕ ನೀಡುತ್ತಿದೆ. ನಮ್ಮ ಕಾಲೇಜಿಗೂ ಅವರು ನೀಡುತ್ತಾ ಬರುತ್ತಿರುವ ಕೊಡುಗೆಗಳು ಅಪಾರವಾಗಿದೆ.ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದು ಉತ್ತಮ ಕಲಿಕೆಯೊಂದಿಗೆ ಶಾಲೆಗೆ ಮತ್ತು ತಮ್ಮ ಮುಂದಿನ ಜೀವನಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕೆಂದು ಹೇಳಿದರು.















ಬಳಿಕ ಕೋಟೆ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ನಿರಂತರವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿವಿಧ ಯೋಜನೆಗಳನ್ನು ಧಾನವಾಗಿ ನೀಡುತ್ತಾ , ಶಿಕ್ಷಣ ಪ್ರೋತ್ಸಾಹಕರಾಗಿ ಸಹಕಾರ ನೀಡುತ್ತಾ ಬರುತ್ತಿರುವ ಕೋಟೆ ಫೌಂಡೇಶನ್ ಇದರ ಸಂಸ್ಥಾಪಕರಾದ ರಘು ರಾಮ ಕೋಟೆ, ಶ್ರೀಮತಿ ಅರ್ಚನಾ ಕೋಟೆ, ಮ್ಯಾನೇಜರ್ ವಿರೇಶ್ ಹಾಗೂ ಕೋರ್ಡಿನೇಟರ್ ಪ್ರದೀಪ್ ಉಬರಡ್ಕ ರನ್ನು ಕಾಲೇಜು ವತಿಯಿಂದ ಗೌರವಿಸಿ ಸನ್ಮಾನಿಸ ಲಾಯಿತು.
ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್, ಅಮೃತ ಮಹೋತ್ಸವ ಸಮಿತಿಯ ಸದಸ್ಯರಾದ ಹಿರಿಯ ಸಿವಿಲ್ ಇಂಜಿನಿಯರ್ ವಿಜಯಕುಮಾರ್,ಶಾಲಾ ಹಿರಿಯ ಉಪನ್ಯಾಸಕ ಕೃಷ್ಣ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪಗೌಡ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲರಾದ ಮೋಹನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಕಾಲೇಜು ಬೆಳೆದು ಬಂದ ಹಾದಿ ಹಾಗೂ 75 ವರ್ಷದ ಅಮೃತ ಮಹೋತ್ಸವ ಆಚರಣೆಯ ಕುರಿತ ಮಾಹಿತಿಯನ್ನು ವಿವರಿಸಿದರು.
ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ವಂದಿಸಿ ಉಪನ್ಯಾಸಕಿ ಶ್ರೀಮತಿ ಸತ್ಯಾವತಿ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಅತಿಥಿಗಳಾಗಿ ರೈಟು ಟು ಲಿವ್ ಕೋಟೆ ಫೌಂಡೇಶನ್ ನ ಸಂಸ್ಥಾಪಕರಾದ ರಘುರಾಮ ಕೋಟೆಯವರ
ಪತ್ನಿ ಶ್ರೀಮತಿ ಅರ್ಚನಾ ಕೋಟೆ, ಪುತ್ರಿ ಆಧ್ಯ ಕೋಟೆ, ಗಣಪಯ್ಯ ಪೆರುವಾಜೆ ವನಶ್ರೀ,ಶ್ರೀಮತಿ ಶಶಿಕಲಾ ಗಣಪಯ್ಯ,ಕೋಟೆ ಫೌಂಡೇಶನ್ ನ ಸಾಯಿ ರಂಜನ್ ಕಲ್ಚಾರ್, ಉಪಸ್ಥಿತರಿದ್ದರು.
ಉಪನ್ಯಾಸಕರುಗಳಾದ ನವೀನ್,ಶ್ರೀಮತಿ ಸ್ಮಿತಾ, ಶ್ರೀಮತಿ ಆದ್ಯಶ್ರೀ, ಧಿವಾಕರ್ ಹಾಗೂ ಇತರರು ಸಹಕರಿಸಿದರು.










