ಸಂಪಾಜೆ ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿ ಇದರ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನಾ ಕಾರ್ಯಕ್ರಮವು ಜು 26 ರಂದು ನಡೆಯಿತು.
















ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಿಕ್ಷಣ ತರಗತಿ ಕೊಠಡಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿ ವೇಲು ಉದ್ಘಾಟಸಿದರು .ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಅವಕಾಶ ಕಲ್ಪಿಸಿರುವುದರಿಂದ ಬಡವರ ಮಕ್ಕಳಿಗೆ ಅನುಕೂಲವಾಗಿದೆ. ಕಾರ್ಯಕ್ರಮ ಆರಂಭಿಸಿದ ಸಿದ್ದರಾಮಯ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ. ಎಂ. ಸಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ವಹಿಸಿದ್ದರು .ಕಾರ್ಯಕ್ರಮದ ಉದ್ಘಾಟನೆಯನ್ನು ಸೊಸೈಟಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ನೆರವೇರಿಸಿ ಸರಕಾರದ ಈ ಯೋಜನೆ ಬಡವರ ಮಕ್ಕಳಿಗೆ ಅನುಕೂಲವಾಗಿದೆ ಎಂದು ಹೇಳಿದರು .
ಉಪಾಧ್ಯಕ್ಷರಾದ ಎಸ್. ಕೆ ಹನೀಫ್ ಸರಕಾರಿ ಶಾಲೆಯ ಹಲವು ವರ್ಷಗಳ ಬೇಡಿಕೆ ಈಡೇರಿಕೆ ಆಗಿದೆ ಬಹಳ ಸಂತೋಷ ಆಗಿದೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಾರ್ಡ್ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ ಮಾತನಾಡಿ ಸುಳ್ಯ ತಾಲೂಕು ವ್ಯಾಪ್ತಿಯ 13 ಶಾಲೆಯಲ್ಲಿ ನಾನು ಪ್ರತಿನಿಧಿಸುವ ಕಲ್ಲುಗುಂಡಿ ಸರಕಾರಿ ಶಾಲೆ ಆಯ್ಕೆ ಆಗಿದೆ ಹಾಗೂ ನಮ್ಮ ಕ್ಷೇತ್ರದ 2ಅಂಗನವಾಡಿ ಕೇಂದ್ರ ಕೂಡ lkg UKG ಮಂಜೂರಾಗಿದೆ ಬಹಳ ಸಂತೋಷ ಆಗಿದೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರನ್ನು ಅಭಿನಂದಿಸಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಂದರಿ ಅಭಿನಂದಿಸಿ ಮಾತನಾಡಿದರು ಸಿ.ಆರ್.ಪಿ ಮಮತಾ ಸಂದರ್ಭೋಚಿತವಾಗಿ ಮಾತನಾಡಿದರು ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್, ರಜನಿ ಶರತ್ ಪ್ರೌಡ ಶಾಲೆ ಎಸ್. ಡಿ ಎಂ. ಸಿ ಅಧ್ಯಕ್ಷರಾದ ರಬಿಯಾ ಸಿದ್ದೀಕ್ ಮುಖ್ಯ ಗುರುಗಳಾದ ಚಂದ್ರಾವತಿ, ಜಯಶ್ರೀ ಉಪಸ್ಥಿತರಿದ್ದರು
ಕಮಲಾಕ್ಷ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು ಮುಖ್ಯ ಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ ಶಿಕ್ಷಕಿ ರೋಹಿಣಿ ವಂದಿಸಿದರು.










