ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಾಗಿ ಮೂರು ವರ್ಷ

0

ಪ್ರವೀಣ್ ನೆಟ್ಟಾರು ಪುತ್ಥಳಿಗೆ ಮಾಲಾರ್ಪಣೆ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ ಮೂರು ವರ್ಷವಾಗಿದ್ದು ಬಲಿದಾನ ದಿನವಾದ ಜು.26 ರಂದು ಅವರ ಸಮಾಧಿಗೆ ತೆರಳಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ , ಸುಳ್ಯ ಬಿ ಜೆ ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಉಪಾಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯರು, ಹಾಗೂ ಪ್ರವೀಣ್ ನೆಟ್ಟಾರು ರವರ ತಂದೆ ಶೇಖರ ಪೂಜಾರಿ,ತಾಯಿ ಶ್ರೀಮತಿ ರತ್ನಾವತಿ ,ಪತ್ನಿ ಶ್ರೀಮತಿ ನೂತನ ಪ್ರವೀಣ್ ಉಪಸ್ಥಿತರಿದ್ದರು.


ನಿವೃತ್ತ ಯೋಧ ಕ್ಯಾ.ಸುದಾನಂದರಿಗೆ ಸನ್ಮಾನ

ನಿವೃತ್ತ ಯೋಧ ಕ್ಯಾ.ಸುಧಾನಂದ ಪೆರುವಾಜೆಯವನ್ನು ಸನ್ಮಾನಿಸಲಾಯಿತು.