ಸಂಸದ ಕ್ಯಾ. ಬ್ರಿಜೇಶ್
ಚೌಟ ರೊಂದಿಗೆ
ರಾಷ್ಟ್ರೀಯ ವಿಚಾರಗಳ ಸಂವಾದ ಕಾರ್ಯಕ್ರಮ
ಭಾರತೀಯ ಪ್ರವಾಸಿಗರ ಮೇಲೆ ಪಾಕಿಸ್ತಾನದ ಉಗ್ರರು ಪೆಹಾಲ್ಗಮ್ ನಲ್ಲಿ ನಡೆಸಿದ ಹೇಯ ಕೃತ್ಯ. ಮಾತೆಯರ ಮುಂದೆ ಅವರ ಪತಿಯನ್ನು ಕೊಲ್ಲುವ ಮೂಲಕ ಮಾತೆಯರ ಸಿಂದೂರ ಅಳಿಸಿತು.ಅಷ್ಟು ಮಾತ್ರವಲ್ಲದೆ ಈ ವಿಚಾರ ವನ್ನು ನಿಮ್ಮ ಪ್ರಧಾನಮಂತ್ರಿಗೆ ಹೋಗಿ ಹೇಳಿ ಎಂಬ ಹೇಳಿಕೆಯನ್ನು ನೀಡಿತು.ಇದಕ್ಕೆ ಪ್ರತೀಕರವಾಗಿ ಪ್ರಧಾನಿ ಯವರು ಆಪರೇಷನ್ ಸಿಂದೂರ ಹೆಸರಿನ ಮೂಲಕ ಸಮರ್ಥವಾಗಿ ಉತ್ತರವನ್ನು ನಮ್ಮ ದೇಶದ ಭೂಸೇನೆ, ನೌಕಾ ಸೇನೆ, ಹಾಗೂ ವಾಯು ಸೇನೆಗಳ ಮೂಲಕ ನೀಡಿತು. ಈ ವಿಚಾರವಾಗಿ ವಿಮರ್ಶಕರೊಂದಿಗೆ ಸಂವಾದ ನಡೆಸುವ ಸಲುವಾಗಿ ವೇದಿಕೆಯನ್ನು ಮಂಥನ ವೇದಿಕೆ ಅಣಿಗೊಳಿಸಿದೆ ಎಂದು ಮಂಥನ ವೇದಿಕೆಯ ಸಂಚಾಲಕ ಪ್ರದ್ಯುಮ್ನ ಉಬರಡ್ಕ ರವರು ತಿಳಿಸಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಜು. 26 ರಂದು ನಡೆಸಿದ ಪತ್ರಿಕಾ
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.















ಆ. 2 ರಂದು ಸಂಜೆ ಗಂಟೆ 3.30ಕ್ಕೆ ಸುಳ್ಳದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರಗಳ ಸಂವಾದ ಸಿಂಧೂರ ವಿಜಯ
ಭಾರತದತ್ತ ವಿಶ್ವದ ಚಿತ್ತ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವು ನಡೆಯಲಿದೆ.
ಒಂದುವರೆ ಗಂಟೆಗಳ
ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ತಾಲೂಕಿನ ನಿವೃತ್ತ ಸೈನಿಕರು ಸುಮಾರು 40ಕ್ಕೂ ಮಿಕ್ಕಿ ಸಮವಸ್ತ್ರದಲ್ಲಿ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು, ನಿವೃತ್ತ ಯೋಧರು ಎಂಬ ನೆಲೆಯಲ್ಲಿ ಕ್ಯಾ. ಬ್ರಿಜೇಶ್ ಚೌಟ
ರವರು ರಾಷ್ಟ್ರೀಯ ವಿಚಾರಗಳ ಕುರಿತುಹಾಗೂ ಆಪರೇಷನ್ ಸಿಂದೂರ ವಿಜಯದ ಸಲುವಾಗಿ ವಿದೇಶ ಪ್ರಯಾಣ ಮಾಡಿದರ ಕುರಿತಾಗಿ ಸಂವಾದವನ್ನು ನಡೆಸಿಕೊಡಲಿದ್ದಾರೆ.
ಪೆಹಾಲ್ಗಮ್ ವಿಚಾರದ ಕುರಿತು ನಡೆದ ಯುದ್ಧದ ಚಿತ್ರಣವನ್ನು ಡಿಜಿಟಲ್ ಸಾಕ್ಷ್ಯ ಚಿತ್ರದ ಮೂಲಕ ಪ್ರದರ್ಶನ ಮಾಡಲಾಗುವುದು.
ಭಾರತ ಸೈನ್ಯದಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಸೈನಿಕರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಸ್ಮರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಪ್ರತಿ ಗ್ರಾಮ ಮಟ್ಟದಿಂದ
10 ಮಂದಿ ವಿಮರ್ಶಕರು
ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿಮರ್ಶಕರು ಬರಲಿದ್ದು ಪಾರ್ಕಿಂಗ್ ವ್ಯವಸ್ಥೆಯನ್ನು ಚೆನ್ನಕೇಶವ ದೇವಸ್ಥಾನದಮುಂಭಾಗದಲ್ಲಿ ಮಾಡಲಾಗುವುದು. ಅಲ್ಲಿಂದ ಸಭಾಂಗಣಕ್ಕೆ ಬರಲು ಕಾರ್ಯಕರ್ತರ ವಾಹನದ ಜೋಡಣೆ ಇರುವುದು. ಕಾರ್ಯಕ್ರಮವು ವೈಚಾರಿಕತೆ ಯ ಹಿನ್ನೆಲೆಯಲ್ಲಿ ಪ್ರಸ್ತುತವಾಗಲಿರುವುದು ಎಂದು ಅವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಥನ ವೇದಿಕೆ ಸದಸ್ಯರಾದ ಆರ್ ಕೆ ಭಟ್ ಬೆಳ್ಳಾರೆ,ಎ. ಟಿ.ಕುಸುಮಾ ದರ ಕಾಯರ್ತೋಡಿ, ಜಗದೀಶ್,ಗುರುಪ್ರಸಾದ್, ರಜತ್ ಅಡ್ಕಾರ್, ಅನೂಪ್ ಬಿಳಿಮಲೆ, ಹೇಮಂತ್ ಮಠ, ಕಿಶನ್ ಜಬಳೆ, ಅವಿನಾಶ್ ಕುರುಂಜಿ, ಜಗನ್ನಾಥ್ ಜಯನಗರ ಭಾಗವಹಿಸಿದ್ದರು.










