ಪಡ್ಡಂಬೈಲು ಕೃಷ್ಣಪ್ಪ ಗೌಡರಿಂದ ಹೊಸ ಪ್ರಯೋಗ

ತಾರಸಿಯಲ್ಲಿ ಭತ್ತ, ತರಕಾರಿ ಬೆಳೆದು ಯಶಸ್ವಿಯಾದ ಪಡ್ಡಂಬೈಲು ಕೃಷ್ಣಪ್ಪ ಗೌಡರು ಇದೀಗ ತಮ್ಮ ತಾರಸಿಯಲ್ಲಿ ಮರ ಕೆಸು ಬೆಳೆದು ಯಶಸ್ವಿಯಾಗಿದ್ದಾರೆ.
ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿಯಾಗಿರುವ ಪಡ್ಡಂಬೈಲು ಕೃಷ್ಣಪ್ಪ ಗೌಡರು ಮಂಗಳೂರಿನ ಮರೋಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್ ಬಳಿ ನೆಲೆಸಿದ್ದು, ತಮ್ಮ ಮನೆಯ ತಾರಸಿಯಲ್ಲಿ ಕೃಷಿ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು. ಈಗಾಗಲೇ
ತಾರಸಿಯಲ್ಲಿ ತರ, ತರದ “ಭತ” ಬೆಳೆ ಸ್ಟೋಬರಿ, ದಾಳಿಂಬೆ, ನಿಂಬೆ,ಕಾಡುಪಿರೆ, ಮರಗೆಣಸು/ಬಳ್ಳಿ ಗೆಣಸು ಅರಸಿನ, ಡ್ರಾಗನ್, ಬಳ್ಳಿ ಬಟಾಟೆ, ದ್ರಾಕ್ಷೆ, ಚೂಣ ಗೆಣಸು, ಪಪ್ಪಾಯಿ, ಈಗ ಮರಕೆಸುವಿನ ಸರದಿ.
ಅವರ ಈ ಕೃಷಿಗೆ ಅವರ ಪತ್ನಿ ಶ್ರೀಮತಿ ಮೀನಾಕ್ಷಿ ಯವರು ಕೂಡಾ ಸಾಥ್ ನೀಡುತ್ತಿದ್ದಾರೆ.

ಈ ವರ್ಷ ಮರ ಕೆಸುವನ್ನು ತಾರಸಿಯಲ್ಲಿ ಬೆಳೆದಿದ್ದಾರೆ. ಮರಗಳಲ್ಲಿ ಹುಟ್ಟುವಂತಹ ಮರ ಕೆಸು ತಾರಸಿಯಲ್ಲಿಯೂ ಬೆಳೆಯಬಹುದೆಂದು ತೋರಿಸಿದ್ದಾರೆ.
















ಭಾಗಮಂಡಲದ ತಮ್ಮ ನೆಂಟರ ಮನೆಯಿಂದ ಕಳೆದ ವರ್ಷ ಕೆಸುವಿನ ಗಡ್ಡೆಯನ್ನು ತಂದಿದ್ದರು. ಈ ಬಾರಿ ಮಳೆಗಾಲ ಆರಂಭದಲ್ಲಿ ಅದನ್ನು ಅಡಿಕೆ ಸಿಪ್ಪೆಯ ಒಳಗೆ ಮರದ ಹುಡಿ, ಒಣ ಸೆಗಣಿಯನ್ನು ಹಾಕಿ ಕೆಸುವನ್ನು ಅದರೊಳಗೆ ಇಟ್ಟರು. ಇದೀಗ ಅವರು ಬೆಳೆದ ಎಲ್ಲ ಕೆಸುಗಳಲ್ಲಿಯೂ ಎಲೆಗಳು ಸಮೃದ್ಧವಾಗಿದೆ.
ಆಟಿ ತಿಂಗಳಾಗಿರುವ ಈ ಸಮಯದಲ್ಲಿ ಔಷಧಿಯ ಗುಣ ಹೊಂದಿರುವ ಮರ ಕೆಸುವಿಗೆ ಎಲ್ಲಿಲ್ಲದ ಬೇಡಿಕೆ. ಅಂಗಡಿಗಳಲ್ಲಿ ಹಣ ನೀಡಿ ಪಡೆಯಬೇಕು. ಮನೆಯಲ್ಲೇ ರಾಸಾಯನಿಕ ರಹಿತವಾಗಿ ಬೆಳೆದರೆ ಉತ್ತಮ ಎನ್ನುತ್ತಾರೆ ತಾರಸಿ ಕೃಷಿಕ ಕೃಷ್ಣಪ್ಪ ಗೌಡರು.
“ನಾನು ಕಳೆದ ಬಾರಿ ಭಾಗಮಂಡಲದಿಂದ ಕೆಸುವಿನ ಬೀಜ ತಂದಿದ್ದೆ.ಈಬಾರಿ ಮಳೆಗಾಲದಲ್ಲಿ ಅದನ್ನು ತೆಂಗಿನಕಾಯಿ ಸಿಪ್ಪೆ ಬಳಸಿ, ಸೆಗಣಿ, ಮರದ ಹುಡಿ ಹಾಕಿ ನೆಟ್ಟಿದ್ದೇನೆ. ಉತ್ತಮ ಫಲ ನೀಡಿದೆ. ಎಲ್ಲರೂ ಈ ರೀತಿ ಬೆಳೆಯಬಹುದು.
ಪಡ್ಡಂಬೈಲು ಕೃಷ್ಣಪ್ಪ ಗೌಡ.










