ಅಪಾರ ನಷ್ಟ
ನಾಲ್ಕೂರು ಗ್ರಾಮದಲ್ಲಿ. ನಿನ್ನೆ ಬೀಸಿದ ಗಾಳಿ ಹಾಗೂ ಮಳೆಯಿಂದಾಗಿ ಹಾಲೆಮಜಲು ಹುಲ್ಲುಕುಮೇರಿ, ಚಿಲ್ತಡ್ಕ, ದೇರಪ್ಪಜ್ಜನಮನೆ, ಹೊಸಹಳ್ಳಿ ಸೇರಿದಂತೆ ಇನ್ನಿತರ ಭಾಗದ ರೈತರ ತೋಟಗಳಲ್ಲಿ ಮರ ಬಿದ್ದದಲ್ಲದೆ ಗಾಳಿಗೆ ಅಡಿಕೆ ಬಾಳೆ ತೆಂಗಿನ ಮರಗಳು ಧಾರಾಶಾಹಿಯಾಗಿದ್ದು ,ಅಪಾರವಾಗಿ ನಷ್ಟ ಉಂಟಾಗಿರುತ್ತದೆ.















ಸೂಕ್ತ ಪರಿಹಾರಕ್ಕಾಗಿ ಮನವಿ ಕಳೆದ ಹಲವಾರು ವರ್ಷಗಳಿಂದ ಈ ಭಾಗದ ರೈತರು ಅಡಿಕೆ ತೆಂಗು ಬಾಳೆ ಕೊಕ್ಕೋ ಸೇರಿದಂತೆ ಇನ್ನಿತರ ಕೃಷಿಗಳನ್ನು ಅವಲಂಬಿಸಿಕೊಂಡಿದ್ದು ಇದೀಗ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಸೇರಿದಂತೆ ಇದೀಗ ಪ್ರಕೃತಿಕ ವಿಕೋಪದಿಂದ ನಷ್ಟ ಉಂಟಾದ ಅಡಿಕೆ ಹಾಗೂ ಇನ್ನಿತರ ಕೃಷಿಗಳಿಗೆ ಸಂಬಂಧಪಟ್ಟ ಸರಕಾರದ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಕಂದಾಯ ಇಲಾಖೆಯವರು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರವನ್ನು ಕೊಡಬೇಕೆಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ. ಚಿತ್ರ ವರದಿ : ಡಿ. ಹೆಚ್.










