














ದೇವಚಳ್ಳ ಗ್ರಾಮದ ಗುಡ್ಡೆಮನೆ ಶ್ರೀಮತಿ ಪದ್ಮಾವತಿಯವರು ಜು.8 ರಂದು ನಿಧನರಾಗಿದ್ದು ಅವರಿಗೆ ಶ್ರದ್ದಾಂಜಲಿ ಮತ್ತು ವೈಕುಂಠಸಮಾರಾಧನೆ ಜು.25ರಂದು ಮಾವಿನಕಟ್ಟೆ ವಿಷ್ಣು ಸಭಾಭವನದಲ್ಲಿ ನಡೆಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬೇರ್ಯ ಮಾಧವ ಗೌಡರವರು ಶ್ರೀಮತಿ ಪದ್ಮಾವತಿ ಗುಡ್ಡೆಯವರ ಆದರ್ಶಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ಪುಷ್ಪಾವತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ರಾಮಚಂದ್ರ ಗುಡ್ಡೆಯವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪತಿ ಸುಂದರ ಗೌಡ ಗುಡ್ಡೆ ನಾಗನಗದ್ದೆ,ತಳೂರು,ಪುತ್ರಿ ಶ್ರೀಮತಿ ಶಹನ,ಅಳಿಯ ನವೀನ್ ಕುಮಾರ್ ದೋಣಿಪಲ್ಕೆ ಕಳಿಯ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.










