ಪೆರುವಾಜೆ ಶಾಲಾ ವಿದ್ಯಾರ್ಥಿಗಳಿಗೆ ಕೋಟೆ ಪೌಂಡೇಷನ್ ನಿಂದ ಬ್ಯಾಗ್ ವಿತರಣೆ

0

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೋಟೆ ಫೌಂಡೇಶನ್ ವತಿಯಿಂದ ಬ್ಯಾಗ್ ವಿತರಣೆ ನಡೆಯಿತು.


“ರೈಟ್ ಟು ಲಿವ್ ಕೋಟೆ ಪೌಂಡೇಷನ್” ಬೆಂಗಳೂರು ಈ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬ್ಯಾಗುಗಳು, ಪೆನ್ಸಿಲ್ , ಸಿಹಿ ತಿಂಡಿಗಳನ್ನು ದಾನಿಗಳಾದ ಕೋಟೆ ಫೌಂಡೇಶನ್ ಸಿ.ಇ.ಒ ಗಳಾದ ರಘುರಾಮ ಕೋಟೆ, ಅವರ ಪತ್ನಿ ಅರ್ಚನ ಕೋಟೆ, ಶ್ರೀಯುತ ಗಣಪಯ್ಯ, ಶ್ರೀಮತಿ ಶಶಿಕಲಾ,‌ ಮ್ಯಾನೇಜರ್ ವೀರೇಶ್ ವಿತರಿಸಿರುತ್ತಾರೆ. ದಾನಿಗಳಾದ ಶ್ರೀ ರಘುರಾಮ ಕೋಟೆಯವರು ಶಾಲೆಯ ಬಗ್ಗೆ ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಇನ್ನಷ್ಟು ಕೊಡುಗೆಗಳನ್ನು ನೀಡುವ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ವಿಜಯ ಆಚಾರ್ಯ , ಉಪಾಧ್ಯಕ್ಷರಾದ ಶ್ರೀಮತಿ ಸವಿತಾ, ಪೆರುವಾಜೆ ಗ್ರಾಮ ಪಂಚಾಯತ್ ವಾರ್ಡ ಸದಸ್ಯರಾದ ಪದ್ಮನಾಭ ಶೆಟ್ಟಿ, ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಶ್ರುತಿ , ಪೋಷಕರು, ಶಿಕ್ಷಕ ವೃಂದ ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.