ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆ ಬಳಿ ರಾಷ್ಟೀಯ ಹೆದ್ದಾರಿಗೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾದ ಘಟನೆ ಜು.೨೭ ರಂದು ಸಂಭವಿಸಿದೆ.
















ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆ ಬಳಿ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ೨೭೫ ರಲ್ಲಿ ಬಿದ್ದ ಭಾರೀ ಗಾತ್ರದ ಮರ ಅಡ್ಡಲಾಗಿ ಬಿದ್ದಿತ್ತು. ಇದರಿಂದ ಸುಳ್ಯ ಕಡೆಯಿಂದ ಮತ್ತು ಸುಳ್ಯದ ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೆಲಕಾಲ ರಸ್ತೆಯಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿತ್ತು. ಕೂಡಲೇ ಸಾರ್ವಜನಿಕರು, ಪಂಚಾಯತ್‌ಗೆ ಮಾಹಿತಿ ತಿಳಿಸಿದ್ದು ೨ ಜೆಸಿಬಿ ಯಂತ್ರಗಳನ್ನು ತರಿಸಿ ಗ್ರಾಮ ಪಂಚಾಯತ್ ಸಾರ್ವಜನಿಕರು, ಪೊಲೀಸರು, ಮೆಸ್ಕಾಂ ಸಿಬ್ಬಂದಿ , ಸಹಕಾರದೊಂದಿಗೆ ಮರ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ ಹಾಗೂ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ವಿಪತ್ತು ತಂಡದ ಚಿದಾನಂದ ಮೂಡನಕಜೆ, ಎಸ್. ಎಸ್ ಎಫ್ ತಂಡದ ಜಾಬಿರ್, ಹ್ಯಾರಿಸ್, ಸಿದ್ದೀಕ್, ಸ್ಥಳೀಯರಾದ ಅಶ್ರಫ್, ನವೀನ್ ಜಿ. ಜಿ, ರಕ್ಷಿತ್ ಜಿ. ಜಿ, ಇಬ್ರಾಹಿಂ ಏಮ್. ಬಿ. ಆಟೋ ಚಾಲಕ ಕೃಷ್ಣ ಪ್ರಸಾದ್ ಅಮೀರ್ ಜಿ.ಎಂ ಉಪಸ್ಥರಿದ್ದರು. ಪೊಲೀಸ್ ಇಲಾಖೆಯವರು ಹಾಜರಿದ್ದು, ಸಹಕರಿಸಿದರು.










