ಪೈಚಾರ್ ಅಲ್-ಅಮೀನ್ ಯೂತ್ ಸೆಂಟರ್ ಹಾಗೂ ಎಸ್ ಬಿ ಎಸ್ ಖುವ್ವತ್ತುಲ್ ಇಸ್ಲಾಂ ಮದರಸ ಇದರ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ

0

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಮತ್ತು ಎಸ್ ಬಿ ಎಸ್ ಖುವ್ವತುಲ್ ಇಸ್ಲಾಂ ಮದ್ರಸಾ ವತಿಯಿಂದ ಜು. 27ರಂದು ಪೈಚಾರ್ ಮದರಸದ ಆವರಣದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಪೊಲೀಸ್ ಠಾಣೆಯ ಸಹಾಯ ಉಪನಿರೀಕ್ಷಕರಾದ ಸೋಮಯ್ಯ ನಾಯ್ಕ್ ನೆರವೇರಿಸಿದರು. ಪೈಚಾರ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶಮೀರ್ ಅಹ್ಮದ್ ನಹೀಮಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಅಲ್-ಅಮೀನ್ ಯೂತ್ ಸೆಂಟರ್ ಇದರ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಭಾಷಣ ನೀಡಿದ ಜಾಲ್ಸೂರು ಜುಮ್ಮಾ ಮಸೀದಿ ಖತೀಬರಾದ ಮುನೀರ್ ಸಅದಿ ಅಲ್ ಅರ್ಷದಿ ರವರು ಮಾದಕ ವ್ಯಸನದ ಹಾನಿಕಾರಕ ಮತ್ತು ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ,ಯುವ ಪೀಳಿಗೆಯ ಭವಿಷ್ಯ ರಕ್ಷಣೆಗೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿರುವುದು ಶ್ಲಾಘನೀಯ ಕಾರ್ಯವೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಪೈಝಲ್ ಸಖಾಫಿ ಸದರ್ ಮುಅಲ್ಲಿಮ್, ಮುಜೀಬ್ ಪೈಚಾರ್ ಸದಸ್ಯರು ಗ್ರಾಮ ಪಂಚಾಯತ್ ಜಾಲ್ಲೂರು, ಹಾಜಿ ಇಬ್ರಾಹಿಂ ಪಿ ಅಧ್ಯಕ್ಷರು ಬದ್ರಿಯ ಜುಮಾ ಮಸೀದಿ , ಹನೀಫ್ ಪಿ ಕೆ ಪ್ರಧಾನ ಕಾರ್ಯದರ್ಶಿ, ಇಬ್ರಾಹಿಂ ಎಸ್ ಎ ಮದರಸ ಉಸ್ತುವಾರಿ, ಮಾ.ಮಹಮ್ಮದ್ ನಿಫಾಲ್ ಅಧ್ಯಕ್ಷರು SBS ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಬೂಸಾಲಿ ಯವರು ಕಾರ್ಯಕ್ರಮ ನಿರೂಪಿಸಿದರು.