ಯೇನೆಕಲ್ಲು ಗ್ರಾಮದ ಪದ್ನಡ್ಕ ದಿ. ವಿಜಯಕುಮಾರ್ ರವರ ಪುತ್ರಿ, ಕೋಡಿಂಬಾಲದ ರಂಜಿತ್ ರವರ ಪತ್ನಿ ಶ್ರೀಮತಿ ಅಶ್ವಿನಿಯವರು ಅಸೌಖ್ಯದಿಂದ ಜು. 22ರಂದು ತವರುಮನೆ ಪದ್ನಡ್ಕದಲ್ಲಿ ನಿಧನರಾದರು. ಇವರಿಗೆ 25 ವರ್ಷ ವಯಸ್ಸಾಗಿತ್ತು.















ಸುಮಾರು 1.5 ವರ್ಷಗಳ ಹಿಂದೆ ರಂಜಿತ್ ರೊಂದಿಗೆ ಇವರ ವಿವಾಹ ನಡೆದಿತ್ತು. ವಿವಾಹವಾಗಿ ಒಂದು ತಿಂಗಳಲ್ಲೇ ಇವರಲ್ಲಿ ಬ್ಲಡ್ ಕ್ಯಾನ್ಸರ್ ಪತ್ತೆಯಾಗಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಟ್ಟು 7 ಬಾರಿ ಕಿಮೋ ಟ್ರೀಟ್ ಮೆಂಟ್ ಪಡೆದು ಅಲ್ಪ ಗುಣಮುಖರಾದರೂ ಬಳಿಕ ಅನಾರೋಗ್ಯ ಉಲ್ಬಣಗೊಂಡು ಜು. 22ರಂದು ಕೊನೆಯುಸಿರೆಳೆದರು.
ಮೃತರು ಪತಿ ರಂಜಿತ್, ತಾಯಿ ಶ್ರೀಮತಿ ಪ್ರಮೀಳಾ, ಸಹೋದರಿಯರಾದ ಮಂಗಳೂರಿನಲ್ಲಿ ನರ್ಸಿಂಗ್ ಓದುತ್ತಿರುವ ಕು. ನಿಶ್ಮಿತಾ ಪಿ.ವಿ, ಕು. ಭಾಗ್ಯಲಕ್ಷ್ಮಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










