ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು – ಡಾ. ಜ್ಯೋತಿ ಆರ್ ಪ್ರಸಾದ್
ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಸೊಗಡನ್ನು ಉಣ ಬಡಿಸುವ ಉದ್ದೇಶದಿಂದ ಕೆಸರುಗದ್ದೆ ಆಟೋಟಗಳನ್ನು ಬೂಡು ಶ್ರೀ ಭಗವತಿ ಗದ್ದೆಯಲ್ಲಿ ಆಯೋಜಿಸಲಾಗಿತ್ತು. ಕಾಲೇಜಿನ ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆನೀಡಿ, ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕ್ಕೊಳ್ಳುವುದರ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾಲೇಜಿನ ಟ್ರಸ್ಟಿ ಮೌರ್ಯ ಆರ್ ಪ್ರಸಾದ್ ಮಾತನಾಡಿ ಕೆಸರುಗದ್ದೆ ಕ್ರೀಡಾ ಕೂಟದ ಮಹತ್ವ ಈಗಿನ ತಲೆಮಾರಿಗೆ ಅತ್ಯಾವಶ್ಯಕ ಎಂದು ಶುಭ ಹಾರೈಸಿದರು. ಗೌರವ ಉಪಸ್ಥಿತರಾಗಿ ಪನ್ನೆ ಬೀಡು ಭಗವತಿ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ಮಾತನಾಡಿ ಗ್ರಾಮೀಣ ಕ್ರೀಡೆಗಳು ಬದುಕಿನಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸುತ್ತವೆ ಎನ್ನುವುದನ್ನು ತಿಳಿಸಿದರು. ಕೇರ್ಪಳ ಶ್ರೀ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
















ಪ್ರಕೃತಿಯ ಮಡಿಲಲ್ಲಿ ಸಂಸ್ಥೆಯು ಆಯೋಜಿಸಿದ ಹಗ್ಗ ಜಗ್ಗಾಟ, ವಾಲಿಬಾಲ್, ಡಾರ್ಜ್ ಬಾಲ್ ಜೊತೆಗೆ ಹಲವು ಸಾಂಪ್ರದಾಯಿಕ ಆಟಗಳ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸಂಪ್ರದಾಯಿಕ ನೃತ್ಯ ಪ್ರದರ್ಶನವನ್ನು ಉಪನ್ಯಾಸಕಿ ಶ್ರೀಮತಿ ಸುಸ್ಮಿತಾ ಜಾಕೆ ಅವರ ಮಾರ್ಗದರ್ಶನದಲ್ಲಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಗಿಲ್ನಲ್ಲಿ ಮಡಿದ ವೀರ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಎಂ ಎಲ್, ವಿದ್ಯಾರ್ಥಿಗಳಾದ ಅಮೂಲ್ಯ, ಜನನಿ, ರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾ ಪ್ರಸಾದ್ ಕೆ ವಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ವಿದ್ಯಾರ್ಥಿಗಳು ಹಾಗೂ ಭೋದಕ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.










