ಸುಳ್ಯದ ಮಂಡೆಕೋಲಿನ ಬೊಳುಗಲ್ಲು ನಿವಾಸಿಯಾಗಿರುವ ಶ್ರೀಮತಿ ಜಲಜಾಕ್ಷಿ ಹಾಗೂ ಸೋಮಪ್ಪ ದಂಪತಿಯ ಪುತ್ರ ಬ್ರಿಜೇಶ್ ಇವರು 2024 -25 ಶೈಕ್ಷಣಿಕ ಸಾಲಿನಲ್ಲಿ ಇಂಗ್ಲೆಂಡಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ‘University of Greenwich’ ನ Natural Resources Institute ನಲ್ಲಿ Engineering and Science ವಿಭಾಗದ Applied food Safety and Quality Management ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಜುಲೈ 24ರಂದು ಪಡೆದಿದ್ದಾರೆ.















ಇವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಜೀವವಿಜ್ಞಾನದಲ್ಲಿ ಬಿ.ಎಸ್ಸಿ ಪದವಿ ಶಿಕ್ಷಣವನ್ನು ಪೂರೈಸಿದ್ದು, 2022-23 ಶೈಕ್ಷಣಿಕ ವರ್ಷದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ Food Science and Nutrition ವಿಷಯದಲ್ಲಿ MSc ಪದವಿಯನ್ನು ಪಡೆದಿರುತ್ತಾರೆ.










