ಬೆಳ್ಳಾರೆ ಮೆಸ್ಕಾಂ ಜೆ.ಇ ಆಗಮನ -ಭರವಸೆ ಬಳಿಕ ಗ್ರಾಮ ಸಭೆ
ಕೊಡಿಯಾಲ ಗ್ರಾಮ ಪಂಚಾಯತ್ ಗ್ರಾಮ ಸಭೆ ನಡೆಯುವ ಮುನ್ನವೇ ವಿದ್ಯುತ್ ಸಮಸ್ಯೆ ಮತ್ತು ಲೈನ್ ಮೆನ್ ನೇಮಕ ಬಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಕೊಡಿಯಾಲ ಸ.ಹಿ.ಪ್ರಾ.ಶಾಲೆಯಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ನ 2025 -26 ನೇ ಸಾಲಿನ ಗ್ರಾಮ ಸಭೆ ನಿಗದಿಯಾಗಿತ್ತು.
ಗ್ರಾಮ ಸಭೆಯ ಮೊದಲು ಕೊಡಿಯಾಲದಲ್ಲಿ ವಿದ್ಯುತ್ ಸಮಸ್ಯೆ ಹಲವು ವರ್ಷಗಳಿಂದ ಇದ್ದು ಗ್ರಾಮ ಸಭೆಯ ಮೊದಲು ಜೆ.ಇ ಯವರು ಬರಬೇಕು . ಇಲ್ಲವಾದಲ್ಲಿ ಗ್ರಾಮ ಸಭೆ ಮಾಡುವುದು ಬೇಡ ಎಂದು ಇಸಾಕ್ ಕೊಡಿಯಾಲ ಮತ್ತು ಗ್ರಾಮಸ್ಥರು ಹೇಳಿದರು.

ಆಗ ಗ್ರಾ.ಪಂ.ಸದಸ್ಯ ಕರುಣಾಕರ ಆಳ್ವ ಮತ್ತು ಪಿಡಿಒ ರವರು ಗ್ರಾಮ ಸಭೆ ಮಾಡುವ ಜೆ.ಇ ಯವರು ಇಲ್ಲಿ ಬಂದು ಮಾಹಿತಿ ಕೊಡುತ್ತಾರೆ ಎಂದು ಗ್ರಾಮಸ್ಥರಲ್ಲಿ ಹೇಳಿದರು.ಇದಕ್ಕೆ ಒಪ್ಪದ ಇಸಾಕ್ ಕೊಡಿಯಾಲ,ಉಪೇಂದ್ರ ನಾಯಕ್,ಆನಂದ ನಾಯಕ್ ಮತ್ತು ಗ್ರಾಮಸ್ಥರು ಮೆಸ್ಕಾಂ ಜೆ.ಇ ಬರಲೇ ಬೇಕು ನಂತರ ಗ್ರಾಮ ಸಭೆ ಮಾಡುವ ಎಂದು ಪಟ್ಟುಹಿಡಿದರು.
ಆಗ ಕರುಣಾಕರ ಆಳ್ವರವರು ಜೆ.ಇಯವರಿಗೆ ಫೋನ್ ಮಾಡಿ ಬರಲು ಹೇಳಿದರು.
ಬಳಿಕ ಜೆ.ಇ.ಪ್ರಸಾದ್ ಕತ್ಲಡ್ಕರವರು ಬಂದರು.
ನಂತರ ಗ್ರಾಮ ಸಭೆಗೆ ಶಾಲಾ ಕೊಠಡಿಗೆ ಎಲ್ಲರೂ ತೆರಳಿದರು.

ಗ್ರಾಮ ಸಭೆ ಪ್ರಾರಂಭವಾಗುತ್ತಿದ್ದಂತೆ
ಇಸಾಕ್ ಕೊಡಿಯಾಲ,ಲೋಕೇಶ್ ಕಲ್ಪಡ,ವಿಠಲ ಗೌಡ ಕಲ್ಪಡ,ಅಬೂಬಕ್ಕರ್ ಮಾಲೆಂಗಿರಿ,ಇಸ್ಮಾಯಿಲ್ ಮಾಲೆಂಗಿರಿ,ರಾಧಾಕೃಷ್ಣ ಪೊಟ್ರೆ,ಅಜೀಜ್ ಮಾಲೆಂಗಿರಿಯವರು
ಮೊದಲು ಮೆಸ್ಕಾಂ ಜೆ.ಇಯವರು ಮಾತಾಡಲಿ ನಂತರ ಗ್ರಾಮ ಸಭೆ ಪ್ರಾರಂಭಮಾಡುವ ಎಂದು ಹೇಳಿದರು.
ಈ ಬಗ್ಗೆ ಕೆಲಹೊತ್ತು ಚರ್ಚೆ ನಡೆಯಿತು.















ಆಗ ಪ್ರಸಾದ್ ರವರು ಮಾಹಿತಿ ನೀಡಲು ವೇದಿಕೆಯಿಂದ ಎದ್ದು ಬಂದರು.ಆಗ ಇಸಾಕ್ ರವರು ಸಭೆಯ ಎದುರು ಬಂದು ಕೊಡಿಯಾಲದಲ್ಲಿ ವಿದ್ಯುತ್ ಸಮಸ್ಯೆ ಇದೆ.ಇಲ್ಲಿಗೆ ಶಾಶ್ವತ ಲೈನ್ ಮೆನ್ ಒದಗಿಸಬೇಕು.ಹಳೆಯ ತಂತಿಗಳನ್ನು ದುರಸ್ಥಿಪಡಿಸಲು ಮತ್ತು ಮಾಲೆಂಗಿರಿಯಿಂದ ಹಾದುಹೋದ ಹೆಚ್.ಟಿ.ಲೈನ್ ನನ್ನು ಕಲ್ಲಗದ್ದೆಯಿಂದ ರಸ್ತೆ ಬದಿ ಬಂದು ಬಾಚೋಡಿಗೆ ಸೇರಿಸಬೇಕು.ಕಲ್ಪಡ,ಮೂವಪ್ಪೆ ಎರಡು ಕಡೆಗಳಲ್ಲಿ ಟಿ.ಸಿ.ಇದೆ ಈ ಬಗ್ಗೆ ಹಲವು ಬಾರಿ ಮನವಿ ಕೊಟ್ಟರೂ ಮೆಸ್ಕಾಂ ಸ್ಪಂದಿಸಲಿಲ್ಲ ಎಂದು ಹೇಳಿದರು.
ಇದಕ್ಕೆ ಮೆಸ್ಕಾಂ ಜೆ.ಇ.ಪ್ರಸಾದ್ ರವರು ನಮ್ಮಲ್ಲಿ ಲೈನ್ ಮ್ಯಾನ್ ಗಳ ಸಂಖ್ಯೆ ಕಡಿಮೆ ಇದೆ.
ಈಗ ಇರುವ ಲೈನ್ ಮೆನ್ ಗಳು ಕೆಲಸ ಮಾಡುತ್ತಿದ್ದಾರೆ.

ಒಂದು ಟ.ಸಿ. ಮಂಜೂರು ಆಗಿದೆ.ಇನ್ನು ಕೆಲವು ದಿನದಲ್ಲಿ ಕೆಲಸ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಹಳೆ ತಂತಿ ಬದಲಾವಣೆ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಆಗ ಇಸಾಕ್ ಮತ್ತಿತರರು ನೀವು ಭರವಸೆ ಕೊಡುವುದು ಬೇಡ ನಮಗೆ ಎಷ್ಟು ದಿನದಲ್ಲಿ ಮಾಡಿ ಕೊಡುತ್ತೀರಿ ಹೇಳಿ. ನಮಗೆ ನಿಮ್ಮ ಜೊತೆ ಹೇಳಿ ಮನವಿ ಕೊಟ್ಟು ಸಾಕಾಗಿದೆ. ನಾನು ನನಗೆ ಬೇಕಾಗಿ ಹೇಳುವುದಲ್ಲ. ಗ್ರಾಮಸ್ಥರ ಪರವಾಗಿ ಹೇಳುತ್ತಿದ್ದೇನೆ ಎಂದು ಹೇಳಿದರು. ಆಗ ಸೇರಿದ ಗ್ರಾಮಸ್ಥರು ಚಪ್ಪಾಳೆ ಹಾಕಿದರು. ತಂತಿ ತುಂಡಾಗಿ ಬಿದ್ರೆ ಯಾರು ಜನ? ಎಂದು ಆನಂದ ನಾಯಕ್ ಹೇಳಿದರು.
ಇತ್ತೀಚೆಗೆ ಒಬ್ಬರು ವಿದ್ಯುತ್ ತಂತಿ ತಾಗಿ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಕೆಲಹೊತ್ತು ಚರ್ಚೆಗಳು ನಡೆದವು.ಉಪೇಂದ್ರ ನಾಯಕ್ ರವರು ಲೈನ್ ಮೆನ್ ಗಳು ಫೋನ್ ಮಾಡಿದರೆ ಅಲ್ಲಿ ಇದ್ದೇವೆ.ಇಲ್ಲಿ ಇದ್ದೇವೆ ,ರಜೆಯಲ್ಲಿದ್ದೇವೆ ಎಂದು ಹೇಳುತ್ತಾರೆ.ಅವರು ಎಲ್ಲಿಯೇ ಇರಲಿ ಆದರೆ ಸ್ಪಂದಿಸಬೇಕು ಎಂದು ಹೇಳಿದರು.

ಜೆ.ಇ.ಯವರು ಇನ್ನೆರಡು ತಿಂಗಳಲ್ಲಿ ಹೊಸ ಲೈನ್ ಮೆನ್ ಗಳು ಬರುತ್ತಾರೆ.ಆಗ ಕೊಡಿಯಾಲಕ್ಕೆ ಲೈನ್ ಮೆನ್ ನೇಮಕ ಮಾಡುವ ಬಗ್ಗೆ ಒತ್ತಡ ಹಾಕುತ್ತೇನೆ ಎಂದು ಹೇಳಿದರು.
ಬಳಿಕ ಗ್ರಾಮ ಸಭೆ ನಡೆಯಿತು.
ಪಿಡಿಒ ಪ್ರವೀಣ್ ಕುಮಾರ್ ಸಿ.ವಿ.ಸ್ವಾಗತಿಸಿ,ವರದಿ ಮಂಡಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ.ಯವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.
ಸುಳ್ಯ ಸಹಾಯಕ ತೋಟಗಾರಿಕಾ ಅಧಿಕಾರಿ ವಿಜೇತ್ ನೋಡೆಲ್ ಅಧಿಕಾರಿಯಾಗಿದ್ದರು.
ಕುಡಿಯುವ ನೀರು,ರಸ್ತೆ,ನೀರಿನ ಪೈಪ್ ಲೈನ್ ಹಾಗೂ ಇತರ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರಾ ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಆಳ್ವ,ಶ್ರೀಮತಿ ವಿಜಯಕುಮಾರಿ,ಶ್ರೀಮತಿ ಯಶವಂತಿ ಉಪಸ್ಥಿತರಿದ್ದರು.










