ಏನೆಕಲ್ಲು: ರಕ್ತದಾನ ಶಿಬಿರ

0

ವಿವೇಕ ಜಾಗ್ರತ ಬಳಗ ಏನೆಕಲ್ಲು ಇದರ ವತಿಯಿಂದ ಜು.26 ರಕ್ತದಾನ ಶಿಬಿರವನ್ನು ಆದಿಶಕ್ತಿ ಭಜನಾ ಮಂದಿರ ಏನೆಕಲ್ಲು ಇಲ್ಲಿ ಆಯೋಜಿಸಲಾಗಿತ್ತು .

ಈ ಸಂದರ್ಭ ಆರೋಗ್ಯ ಇಲಾಖೆಯವರಿಂದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಉಚಿತವಾಗಿ ನಡೆಸಲಾಯಿತು.
ರಕ್ತದಾನ ಶಿಬಿರವನ್ನು ರೈತ ಯುವಕ ಮಂಡಲ ಏನೆಕಲ್ಲು ಇದರ ಅಧ್ಯಕ್ಷ ಜೀವಿತ್ ಪರಮಲೆ
ದೀಪ ಬೆಳಗಿಸಿ ಉದ್ಘಾಟಿಸಿದರು.

ಆರೋಗ್ಯ ಇಲಾಖೆ ನವ್ಯ ಸಂದೇಶ, Dr ಸೀತಾರಾಮ ಭಟ್, ವಿವೇಕ ಜಾಗೃತ ಬಳಗ ಏನೆಕಲ್ಲು ಇದರ ಅಧ್ಯಕ್ಷ ಹವೀನ್ ಬಾಲಡಿ ಉಪಸ್ಥಿತರಿದ್ದರು.
ಸುಂದರ ಗೌಡ ಕಟ್ಟ ಸ್ವಾಗತಿಸಿದರು.
ಹವೀನ್ ಬಾಲಡಿ
ಧನ್ಯವಾದ ಮಾಡಿದರು.