ಮುರುಳ್ಯ : ಅಟೋ ಚಾಲಕ ಮಾಲಕರ ಸಂಘ ಅಸ್ಥಿತ್ವಕ್ಕೆ

0

ಗೌರವಾಧ್ಯಕ್ಷರಾಗಿ ಅನೂಪ್ ಬಿಳಿಮಲೆ, ಅಧ್ಯಕ್ಷರಾಗಿ ಧರ್ಮಪಾಲ‌ ಕುಲಾಲ್, ಕಾರ್ಯದರ್ಶಿಯಾಗಿ ಶಿವಪ್ರಸಾದ ಕುಕ್ಕಟೆ

ಮುರುಳ್ಯ ಅಲೆಕ್ಕಾಡಿ ಅಟೋ ಚಾಲಕ ಮಾಲಕರ ಸಂಘ ಶ್ರೀ ಮಹಿಷಮರ್ಧಿನಿ ಇದರ ಉದ್ಘಾಟನೆ ಜು. 28ರಂದು ಮುರುಳ್ಯದ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಧರ್ಮಪಾಲ‌ ಕುಲಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಸಂಘವನ್ನು ಉದ್ಘಾಟಿಸಿ, ಶುಭ ಹಾರೈಸಿದರು.


ಸಂಘದ ಗೌರವಾಧ್ಯಕ್ಷರಾಗಿ ಅನೂಪ್ ಬಿಳಿಮಲೆ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕುಕ್ಕಟೆ, ಕೋಶಾಧಿಕಾರಿಯಾಗಿ ವಿಶ್ವನಾಥ ಮದ್ಕೂರ್ ಆಯ್ಕೆಯಾದರು. ಪ್ರಮುಖರಾದ ವಸಂತ ನಡುಬೈಲು, ಕರುಣಾಕರ ಹುದೇರಿ, ಅನೂಪ್ ಆಳ್ವ, ಕು. ಜಾನಕಿ ಶಾಂತಿನಗರ ಅತಿಥಿಗಳಾಗಿ ಭಾಗವಹಿಸಿದ್ದರು.

ಧರ್ಮಪಾಲ್ ಕುಲಾಲ್ ಸ್ವಾಗತಿಸಿ, ವಂದಿಸಿದರು. ದೀಪಕ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು. ಅಟೋರಿಕ್ಷಾ ಚಾಲಕ ಮಾಲಕರಾದ ಲಕ್ಷ್ಮಣ ಗೌಡ, ಪದ್ಮನಾಭ ಪೂದೆ, ತಿಮ್ಮಪ್ಪ ಐ.ಕೆ, ಪ್ರವೀಣ್ ಕಳತ್ತಜೆ
ರವಿ ತೋಟ, ಚಂದ್ರಹಾಸ ಶಾಂತಿನಗರ ಸೇರಿದಂತೆ ಊರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.