ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ

0

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ ಕಾರ್ಯಕ್ರಮವನ್ನು ಜು. 26 ರಂದುಹಮ್ಮಿಕೊಳ್ಳಲಾಯಿತು.
ಯೋಧರಾದ ಪೆರಾಲುಗುತ್ತು ಗುರುಪ್ರಸಾದ್ ರೈ ಯವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಮರ್ಪಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ರಾಜ್ಯಪಾಲರಾದ ಲಯನ್ ಎಂ.ಬಿ.ಸದಾಶಿವ,
ಪ್ರಾಂತೀಯ ರಾಯಭಾರಿ ಲಯನ್ ಜಯರಾಮ ದೇರಪ್ಪಜ್ಜನಮನೆ,ವಲಯಾ ಧ್ಯಕ್ಷ ಲಯನ್ ಚಂದ್ರಶೇಖರ ನಂಜೆ, ಐ. ಪಿ. ಪಿ.ಲಯನ್ ರಾಮಕೃಷ್ಣ ರೈ, ಕಾರ್ಯದರ್ಶಿ ಲಯನ್ ಮಲ್ಲಿಕಾರ್ಜುನಪ್ರಸಾದ್, ಖಜಾಂಜಿ ಲಯನ್ ಜತ್ತಪ್ಪ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಸದಸ್ಯರು ಭಾಗವಹಿಸಿದರು.