ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಗೆ 10 ಮಂದಿ ಪ್ಯಾನೆಲ್ ವಕೀಲರ ಆಯ್ಕೆ

0

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಯ ಸಲಹ ಕೇಂದ್ರಗಳಲ್ಲಿ ಸಾರ್ವಜನಿಕರು ಉಚಿತ ಕಾನೂನು ಸಲಹೆ ಹಾಗೂ ಉಚಿತ ನೆರವನ್ನು ಪಡೆಯಲು ಪ್ಯಾನಲ್ ವಕೀಲರಾಗಿ ಚರಣ್ ರಾಜ್ ಕೆ ಎಂ, ಕೃಷ್ಣ ಪ್ರಸಾದ್ ಡಿ, ಪಿ ಭಾಸ್ಕರ್ ರಾವ್, ಎಂ ಎಂ ಬೊಳ್ಳಪ್ಪ, ಜಗದೀಶ್ ಡಿ ಪಿ, ದಿನೇಶ್ ಎನ್, ಹರೀಶ್ ಬಿ, ರಾಮ ಚಂದ್ರ ಶ್ರೀ ಪಾದ ಹೆಗಡೆ,ಪುಷ್ಪ ರಾಜ್ ಗಾಭೀರ ಬಿ, ಚಂದ್ರ ಶೇಖರ್ ಯು ಇವರುಗಳು ನೇಮಕವಾಗಿದ್ದಾರೆ.

ಈ ಬಗ್ಗೆ ಮುಂದಿನ 3 ತಿಂಗಳು ಜುಲೈ, ಆಗಸ್ಟ್ , ಸೆಪ್ಟೆಂಬರ್ 2025 ರ ತನಕ ಈ ಕೆಳಗೆ ನಮೂದಿಸಿರುವ ವಕೀಲರು ಉಚಿತ ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೋರ್ಟ್ ಆವರಣದಲ್ಲಿ ದಿನೇಶ್. ಎನ್ (ಪ್ರತಿ ದಿನ ಬೆಳಿಗ್ಗೆ 10.00 ರಿಂದ 2.00 ರ ತನಕ ) ಸುಳ್ಯ ತಹಶೀಲ್ದಾರ್ ಕಚೇರಿಯಲ್ಲಿ ಚಂದ್ರಶೇಖರ್ ಉದ್ದಂತಡ್ಕ (ವಾರದ ಸೋಮವಾರ) 10.00 ರಿಂದ 5.00 ರ ತನಕ ಸಿ ಡಿ ಪಿ ಓ ಕಚೇರಿಯಲ್ಲಿ ಪುಷ್ಪರಾಜ ಗಾಂಭೀರ ಬಿ. ವಾರದ ಗುರುವಾರ ರಿಮಾಂಡ್ ವಕೀಲರಾಗಿ ಜಗದೀಶ್ ಡಿ ಪಿ ತಿಂಗಳಲ್ಲಿ ಒಂದು ದಿನ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಾರೆ. ಈ ದಿನಾಂಕವನ್ನು ಒಂದು ವಾರದ ಮೊದಲು ಪೊಲೀಸ್ ಠಾಣೆಯ ಸೂಚನ ಫಲಕದಲ್ಲಿ ಹಾಕಲಾಗುವುದು ಎಂದು ತಿಳಿದು ಬಂದಿದೆ.