ಮೊರಂಗಲ್ಲು ತರವಾಡಿನ ನಾಗಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

0

ಮೊರಂಗಲ್ಲು ತರವಾಡು ಮನೆಯ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಜು. 29 ರಂದು ವಿಶೇಷ ಪೂಜೆ ಹಾಗೂ ಅಭಿಷೇಕವು ನಡೆಯಿತು.

ಸದಾಶಿವ ದೇವಳದ ಅರ್ಚಕ ಹರ್ಷಿತ್ ಬನ್ನಿಂತಾಯರವರ ನೇತೃತ್ವದಲ್ಲಿ ನಾಗ ದೇವರಿಗೆ ವಿಶೇಷ ಅಭಿಷೇಕವಾಗಿ ಮಹಾಮಂಗಳಾರತಿ ಬೆಳಗಿ ಪೂಜೆ ನೇರವೇರಿಸಿದರು.
ನಾಗನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮೊರಂಗಲ್ಲು ಧೂಮಾವವತಿ ಸಪರಿವಾರ ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು, ಆಶಿಕ್ ರೈ ಮೊರಂಗಲ್ಲು ಹಾಗೂ ಕುಟುಂಬಸ್ಥರು ಮತ್ತು ಮೊರಂಗಲ್ಲು ಬೈಲಿನ ಸಮಸ್ತರು ಉಪಸ್ಥಿತರಿದ್ದರು.