ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ ಪ್ರಯುಕ್ತ ನಾಗ ತಂಬಿಲ, ಸಿಯಾಳ ಅಭಿಷೇಕ, ಹಾಲಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು. ಪೂಜಾ ವಿಧಿ ವಿಧಾನಗಳನ್ನು ಗಣೇಶ್ ಭಟ್ ಸುಳ್ಯರವರು ನೆರವೇರಿಸಿದರು.
















ಈ ಸಂದರ್ಭದಲ್ಲಿ ಊರ ಹಾಗೂ ಪರ ಊರ ಭಕ್ತಾದಿಗಳು ಸೇರಿದಂತೆ ದೇವಸ್ಥಾನದ ಆಡಳಿತ ಸಮಿತಿಯವರು ಉಪಸ್ಥಿತರಿದ್ದರು.










