ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು – ನ್ಯಾಯಾಂಗ ಬಂಧನ

ನೆಟ್ಟಾರಿನಲ್ಲಿ ಅಕ್ರಮವಾಗಿ ಪಿಕಪ್ ನಲ್ಲಿ ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪನ್ನು ಬೆಳ್ಳಾರೆ ಪೊಲೀಸರು ವಶಪಡಿಸಿಕೊಂಡ ಘಟನೆ ಜು.29 ರಂದು ಬೆಳಿಗ್ಗೆ ನಡೆದಿದೆ.
ಹಾಸನ ಕಡೆಯಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಪಂಜ ಬೆಳ್ಳಾರೆ ನೆಟ್ಟಾರು ಮಾರ್ಗವಾಗಿ ಈಶ್ವರಮಂಗಲಕ್ಕೆ 5 ಎಮ್ಮೆಗಳನ್ನು ಪಿಕಪ್ (KA- 21 C, 6237) ನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ನೆಟ್ಟಾರಿನಲ್ಲಿ ಪಿಕಪನ್ನು ತಡೆದು ನಿಲ್ಲಿಸಿ ಇಬ್ಬರು ಆರೋಪಿಗಳು,5 ಎಮ್ಮೆಗಳನ್ನು ಪಿಕಪ್ ಸಮೇತ ವಶಪಡಿಸಿಕೊಂಡರು.
















ಆರೋಪಿಗಳಾದ ಮುಜಾಮಿನ್ ಮಯ್ಯಾಳ್ ದೇಲಂಪಾಡಿ,ಅಬ್ದುಲ್ಲ ಕಲ್ಲಡ್ಕ ದೇಲಂಪಾಡಿ ಎಂಬವರು ಆರೋಪಿಗಳಾಗಿದ್ದು ಆರೋಪಿಗಳನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.










